ಮಿಸ್ ಸೌತ್ ಇಂಡಿಯಾ ಸ್ಪರ್ಧೆ : ಬೆಂಗಳೂರಿನ ಅಕ್ಷಿತಾ ಸತ್ಯನಾರಾಯಣ್ ಮಿಸ್ ಕ್ವೀನ್-2022 ಕಿರೀಟ
ಕೇರಳದ ಕೊಚ್ಚಿಯಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದ ಬೆಂಗಳೂರಿನ ವಿದ್ಯಾರ್ಥಿನಿ ಅಕ್ಷಿತಾ ಸತ್ಯನಾರಾಯಣ್ ಅವರು ಕರ್ನಾಟಕ ಮಿಸ್ ಕ್ವೀನ್ 2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಕ್ಷಿತಾ ಸತ್ಯನಾರಾಯಣ್ ಅವರು, ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಮನೋವಿಜ್ಞಾನ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮುಂಬೈಯಲ್ಲಿ ತರಬೇತಿ ಪಡೆದು ರೂಪದರ್ಶಿಯಾಗಿದ್ದಾರೆ.
2019ರ ಮಿಸ್ ಕರ್ನಾಟಕ ರನ್ನರ್ ಅಪ್ ಕಿರೀಟ ಗೆದ್ದುಕೊಂಡಿದ್ದ ಅಕ್ಷಿತಾ 2019ರ ಮಿಸ್ ಗ್ಲಾಮರ್ಸ್ ಲುಕ್ ಕಿರೀಟ್ ಕೂಡ ಮುಡಿಗೇರಿಸಿಕೊಂಡಿದ್ದರು. ಈಕೆ 2019ರ ಅತ್ಯುತ್ತಮ ರ್ಯಾಂಪ್ ವಾಕ್ ಸುಂದರಿ ಪಟ್ಟ ಅಲಂಕರಿಸಿದ್ದರು. ಮಿಸ್ ಫೋಟಿಜೆನಿಕ್ ಫೇಸ್ ಆಫ್ ಕರ್ನಾಟಕ ಗರಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅಕ್ಷಿತ್ ಸತ್ಯಾನಾರಾಯಣ ಅವರು ಜನಪ್ರಿಯ ಕನ್ನಡ ಧಾರವಾಹಿಗಳಲ್ಲಿ ತಮ್ಮ ನಟನಾ ಚತುರತೆಯನ್ನು ಪ್ರಾರಂಭಿಸಿದರು. ಇದೀಗ ತೆಲುಗುವಿನ ಕುಂಕುಮ ಪುವ್ವ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.