ಮಧ್ಯಂತರ ಸಮ್ಮೇಳನದಲ್ಲಿ ಮುಂಡ್ಕೂರು ಜೇಸಿಸ್ ಗೆ ಹಲವು  ಪ್ರಶಸ್ತಿ

  ಮುಂಡ್ಕೂರು;ಪ್ರತೀ ವರ್ಷ ರಕ್ತದಾನ ಶಿಬಿರ, ತರಬೇತಿ ಕಾರ್ಯಾಗಾರ, ಉಚಿತ ಯೋಗ ಶಿಬಿರ, ಶಾಶ್ವತ ಯೋಜನೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಜೇಸಿಯ ಕಂಪನ್ನು ಎಲ್ಲೆಡೆ ಪಸರಿಸಿರುವ ಘಟಕ ಜೇಸಿಐ ಮುಂಡ್ಕೂರು ಭಾರ್ಗವ. ಈ ವರ್ಷ ಪ್ರಶಾಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕೋವಿಡ್ ಸಮಯದಲ್ಲಿ ಅಶಕ್ತರಿಗೆ ಕಿಟ್ ವಿತರಣೆ,  ಸಾಧಕ ಮಹಿಳೆಯರಿಗೆ ಅಭಿನಂದನಾ ಕಾರ್ಯಕ್ರಮ,  ಹಲವು ತರಬೇತಿ ಕಾರ್ಯಕ್ರಮ, ಅಂತರಾಷ್ಟ್ರೀಯ ಯೋಗ ದಿನ, ನಿರಂತರ ಉಚಿತ ಯೋಗ ಶಿಬಿರ, ಪರಿಸರ ದಿನಾಚರಣೆ, ಉಚಿತ ಕೋವಿಡ್ – 19 ಲಸಿಕಾ ಕಾರ್ಯಕ್ರಮ, ಸೆಲ್ಯೂಟ್ ಆಫ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ, ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಶಾಶ್ವತ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕೋವಿಡ್ ನಿಯಮಾವಳಿಯನ್ನು ಅನುಸರಿಸಿ ಇತ್ತೀಚೆಗೆ ನಡೆದ ಜೇಸಿಐ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಮುಂಡ್ಕೂರು ಭಾರ್ಗವ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ರವರಿಗೆ ವಲಯ 15 ರ ಪ್ರಾಂತ್ಯ – ಇ ವಿಭಾಗದಿಂದ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ವಲಯಾಧ್ಯಕ್ಷೆ  ಸೌಜನ್ಯ ಹೆಗ್ಡೆಯವರು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.
. ಘಟಕಕ್ಕೆ ಅತ್ಯುತ್ತಮ ರನ್ನರಪ್ ಪ್ರಶಸ್ತಿ, ಯು ಎನ್ ಎಸ್ ಡಿ ಜಿ ಮತ್ತು ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ವಿಭಾಗದಲ್ಲಿ ವಿಶೇಷ ಮನ್ನಣೆ, ಮೀಡಿಯಾ ಕವರೆಜ್ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನು ಜೇಸಿಐ ಮುಂಡ್ಕೂರು ಭಾರ್ಗವ ಘಟಕ ತನ್ನ ಮುಡಿಗೇರಿಸಿಕೊಂಡಿದೆ‌.  ಈ ಸಂದರ್ಭ ಪ್ರಾಂತ್ಯ – ಇ ವಿಭಾಗದ ವಲಯ ಉಪಾಧ್ಯಕ್ಷ ಗಿರೀಶ್ ಎಸ್ ಪಿ,  ನಿಕಟಪೂರ್ವ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಶರತ್, ದರ್ಶಿತ್ ಶೆಟ್ಟಿ, ವಲಯದ ಪ್ರೋಗ್ರಾಂ ಕಮಿಟಿ ಚೇರ್ಮ್ಯಾನ್ ಅಬ್ದುಲ್ ಜಬ್ಬಾರ್, ವಲಯಾಧಿಕಾರಿಗಳಾದ ಐವನ್ ಸಿಕ್ವೇರಾ, ಎಮ್ ಎನ್ ನಾಯಕ್, ಸಂತೋಷ್ ಕುಮಾರ್, ಕಿರಣ್, ಶ್ರೀನಿವಾಸ್ ಆಚಾರ್ಯ, ಲತಾ ಡಿ ಸುವರ್ಣ, ಘಟಕದ ಪೂರ್ವಾಧ್ಯಕ್ಷೆ ಅರುಣಾ ಕುಲಾಲ್, ಉಳೆಪಾಡಿ ನಿಕಟಪೂರ್ವಾಧ್ಯಕ್ಷ  ಗಿರೀಶ್ ಎ, ಕಾರ್ಯದರ್ಶಿ ಪ್ರತಿಮಾ ಟಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.