ಯುಪಿಸಿಎಲ್ ಗುತ್ತಿಗೆ ಕಂಪನಿಯ ಸಿಬ್ಬಂದಿ ಅಪಘಾತಕ್ಕೆ ಬಲಿ
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿರುವ ಯುಪಿಸಿಎಲ್ ಕಂಪನಿಯ ಎಲೆಕ್ಟ್ರಿಕಲ್ ಗುತ್ತಿಗೆ ಕಂಪನಿ ಹೆರಿಕಾನ್ ನಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಸಿಬ್ಬಂದಿಯೊರ್ವ ಪಡುಬಿದ್ರಿ ಕಾರ್ಕಳ ರಸ್ತೆಯ ಸುಜ್ಲಾನ್ ಕಂಪನಿಯ ಸಮೀಪ ಅಪಘಾತಕ್ಕೆ ಬಲಿಯಾಗಿದ್ದಾರೆ.
ಮೃತ ಯುವಕ ಪಶ್ಚಿಮ ಬಂಗಾಳ ನಿವಾಸಿ ಗುರುದಾಸ್,(26), ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ವಾಸವಿದ್ದ ಈತ ಒರ್ವನೇ ಮಗ, ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಮದುವೆಯ ಸಂದರ್ಭ ರಜೆ ಹಾಕಿ ಊರಿಗೆ ತೆರಳಿದ ಈತ ಕೆಲ ದಿನಗಳ ಹಿಂದೆಯಷ್ಟೇ ಪತ್ನಿಯನ್ನು ತಸಯಿಯೊಂದಿಗೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದ. ಪಡುಬಿದ್ರಿ ಪೇಟೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಈತ ಕಳೆದ ರಾತ್ರಿ 9.50ರ ಸುಮಾರಿಗೆ ತನ್ನ ಬೈಕ್ಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸುಜ್ಲಾನ್ ಕಂಪನಿಯ ಬಳಿ ರಸ್ತೆ ಪಕ್ಕದ ಬಾಂಡ್ ಕಲ್ಲಿಗೆ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಮೃತಪಟ್ಟಿದ್ದ. ಅಪಘಾತದ ತೀವ್ರತೆಗೆ ಬಾಂಡ್ ಕಲ್ಲು ಮೇಲೆದ್ದು ಬಂದಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಊರಿಂದ ಸಂಬಂಧಿಗಳು ಆಗಮಿಸಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಊರಿಗೆ ಸಾಗಿಸಲಿದ್ದಾರೆ.