ಯುವ ಜನತೆಯ ಮನಗೆದ್ದ ನಟಿ ಸುಶ್ಮಿತಾ ರಾಮ್‍ಕಳ

ಪ್ರಸುತ್ತ ದಿನಗಳಲ್ಲಿ ಸಿನಿಮಾ, ಧಾರಾವಾಹಿ, ಮಾಡೆಲಿಂಗ್ ಹೀಗೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಅದರ ಮೂಲಕ ಮಿಂಚಬೇಕು ಎಂಬ ಆಸೆ, ಕನಸನ್ನು ಕಾಣುವ ಅದೆಷ್ಟೋ ಜನರನ್ನು ನಾವು ಕಾಣಬಹುದು. ಇಂತಹ ಸಾಧನೆ ಮಾಡಬೇಕಾದರೆ ಕಲೆ ಎಂಬುದು ತುಂಬಾನೇ ಮುಖ್ಯ. ನಾನು ನಟ- ನಟಿಯಾಗಬೇಕು ಎನ್ನುವ ಕನಸು ಕಾಣುವ ಪ್ರತಿಯೊಬ್ಬರಲ್ಲಿಯೂ ಕಲೆ ಎಂಬುದು ಇದ್ದೆ ಇರುತ್ತದೆ. ಅಂತವರಲ್ಲಿ “ಸುಶ್ಮಿತಾ ರಾಮ್‍ಕಳ” ಒಬ್ಬರು.

ರಾಮಕೃಷ್ಣ. ಪಿ ಹಾಗೂ ಕಲಾವತಿಯವರ ಪ್ರೀತಿಯ ಮಗಳಾದ ಸುಶ್ಮಿತಾ ರಾಮ್‍ಕಳ ಮೂಲತಃ ಬೆಂಗಳೂರಿನವರು, ಇವರು ತನ್ನ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದರು.

ಎಳೆಯ ವಯಸ್ಸಿನಿಂದಲೇ ಮಾಡೆಲಿಂಗ್, ನಟನೆಯ ವಿಚಾರದಲ್ಲಿ ತುಂಬಾ ಅಸಕ್ತಿಯನ್ನು ಹೊಂದಿರುವ ಸುಶ್ಮಿತಾ ನಂತರ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಮಾಡೆಲಿಂಗ್‍ನ್ನು ಪ್ರದರ್ಶಿಸಿದ್ದಾರೆ.ಸೆಲೆಬ್ರಿಟಿ ಶೋ ಸ್ಟಾಪರ್ ಆಗಿದ್ದರು. ಹಾಗೇ ಮಿಸ್ಟರ್ ಅ್ಯಂಡ್ ಮಿಸ್ ಇಂಡಿವುಡ್ ಹೈದರಾಬಾದ್ ಫ್ಲಿಮ್ ಕಾರ್ನೀವಲ್ 2018 ರ ಮಾಡೆಲಿಂಗ್ ಪ್ರದರ್ಶನದಲ್ಲಿ ಎರಡನೇ ಸ್ಥಾನ ಗಳಿಸಿರುತ್ತಾರೆ. ಮೈಸೂರಿನಲ್ಲಿ ನಡೆದ ಮಿಸ್ಟರ್ ಅ್ಯಂಡ್ ಮಿಸ್ ಡೆಕಾಥ್ಲಾನ್ 2018 ರ ಮಾಡೆಲಿಂಗ್ ಪ್ರದರ್ಶನದಲ್ಲಿ ಸುಶ್ಮಿತಾ ರಾಮ್‍ಕಳ ರವರು ರನ್ನರ್ ಅಫ್ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಅರಮನೆ ಗಿಳಿಯಲ್ಲಿ” ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶ್ಮಿತಾ, ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ “ನಾನು ನನ್ನ ಕನಸು” ಎಂಬ ಧಾರಾವಾಹಿಯ ಮೂಲಕ ಜನರ ಮನಸ್ಸಿನಲ್ಲಿ ಅಚ್ಚು ಮೆಚ್ಚಿನ ನಟಿಯಾಗಿದ್ದಾರೆ. ಹಾಗೆಯೇ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಅಭಿಲಾಷ” ಎಂಬ ತೆಲುಗು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಸುಶ್ಮಿತಾ ಪ್ರಸುತ್ತ “ಬೈ 2 ಲವ್” ಎಂಬ ಸಿನಿಮಾ ಒಂದರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್ ಪೇಟೆಯವರ ಜೊತೆ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.

ಜೀವನದಲ್ಲಿ ಮನುಷ್ಯನಿಗೆ ತಾಳ್ಮೆ ಪರಿಶ್ರಮ ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ. ಈ ಮೂರು ಅಂಶ ಮಾನವನಲ್ಲಿ ಇದ್ದರೆ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಹಾಗೆಯೇ ಒಬ್ಬ ನಟಿ- ನಟನಾಗ ಬಯಸುವವರಿಗೆ ಮೊದಲು ತಾಳ್ಮೆ , ವಿಶ್ವಾಸಮುಖ್ಯ. ಸಮಯ ಪ್ರಜ್ಞೆ ಇರುವವರು ತನ್ನ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ ಎಂದು ಸುಶ್ಮಿತಾ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು.

 

 

 

 

Related Posts

Leave a Reply

Your email address will not be published.