ಮಂಗಳೂರು: ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಶುಭಾರಂಭ
ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಂಟರ್ ಸಿಟಿ ಕಟ್ಟಡಲ್ಲಿ ಶುಭಾರಂಭಗೊಂಡಿತು. ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮತ್ತು ಸಫ್ವಾನ್ ಇಸ್ಮಾಯಿಲ್ ಮಾಲಕತ್ವ ಪೆಟ್ ಝೋನ್ ಮಳಿಗೆಯನ್ನು ಉದ್ಯಮಿ ಕೆ.ಇಸ್ಮಾಯಿಲ್ ಸಂತೋಷ ನಗರ ಉದ್ಘಾಟಿಸಿದರು.
6 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ಧೇವೆ. ನಮ್ಮಲ್ಲಿ ದೇಶ ವಿದೇಶಿದ ಸಾಕು ಪಕ್ಷಿ, ಬೆಕ್ಕು Tropical fish monster fish, exotic fish,, ಮೀನಿನ ತೊಟ್ಟಿಗಳು ಔಷಧಗಳು, ಏರ್ ಪಂಪ್ ಮುಂತಾದ ಪೆಟ್ ಬಳಕೆಯಾಗುವ ಎಲ್ಲಾ ಸಲಕರಣೆಗಳು ರಿಯಾಯಿತಿ ದರದಲ್ಲಿ ಇಲ್ಲಿ ಲಭ್ಯ ವಿದೆ ಎಂದು ಸಂಸ್ಥೆಯ ಮಾಲಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ತಿಳಿಸಿದ್ದಾರೆ.
ನಝೀರ್ ದೇರಳಕಟ್ಟೆ, ಉದ್ಯಮಿ ಇಕ್ವಾಲ್ , ಶೌಕತ್ ಅಲಿ, ಅಶಿಕ್ ಪ್ಯಾಬ್ ಲಿಂಕ್, ಹಮೀದ್ ಉಳ್ಳಾಲ್, ಕರೀಂ ದೇರಳಕಟ್ಟೆ, ಇಲ್ಯಾಸ್ ಪರಂಗೀಪೇಟೆ, ರಫೀಕ್ ಪಾವೂರು ಉಪಸ್ಥಿತರಿದ್ದರು.