DR. KIRAN KUMAR MANAGING DIRECTOR OF LALITHAA JEWELLERY DISTRIBUTE FOOD KIT ON HIS BIRTHDAY CELEBRATION
ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿ ಮುಂಚೂಣಿಯಲ್ಲಿವ ಲಲಿತಾ ಜುವೆಲರ್ಸ್ನ ಮಾಲಕರಾದ ಡಾ.ಕಿರಣ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಲಲಿತಾ ಚಾರಿಟೇಬಲ್ ಟ್ರಸ್ಟ್ ಮೂಲಕ ಮಂಗಳೂರಿನ ಲಲಿತಾ ಜುವೆಲರ್ಸ್ ಮುಂಭಾಗ ಕಿಟ್ ವಿತರಿಸಲಾಯಿತು.
ಲಲಿತಾ ಜುವೆಲರ್ಸ್ನ ಮಾಲಕರಾದ ಡಾ.ಕಿರಣ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಲಲಿತಾ ಜುವೆಲರ್ಸ್ನ ಎಲ್ಲಾ ಬ್ರಾಂಚ್ನ ಮುಂಭಾಗ ಲಲಿತಾ ಚಾರಿಟೇಬಲ್ ಟ್ರಸ್ಟ್ ಮೂಲಕ ಕಿಟ್ ವಿತರಿಸಲಾಯಿತು ಅಂತೆಯೇ ಮಂಗಳೂರಿನ ಪಿವಿಎಸ್ನಲ್ಲಿರುವ ಲಲಿತಾ ಜುವೆಲರ್ಸ್ ಎದುರು ರಿಕ್ಷ ಚಾಲಕರಿಗೆ ಕೂಲಿ ಕಾರ್ಮಿಕರಿಗೆ, ಸೆಕ್ಯೂರಿಟಿ ಗಾರ್ಡ್ರವರಿಗೆ ಸೇರಿದಂತೆ ಇನ್ನಿತರರಿಗೆ ಸುಮಾರು 500 ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳಿಯ ಮನಾಪ ಸದಸ್ಯರಾದ ಲೀಲಾವತಿ ಮಾತನಾಡಿ ಲಲಿತಾ ಜುವೆಲರ್ಸ್ ನಂಬಿಕೆ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಗಿದೆ. ಇಂದು ಕಿಟ್ ವಿತರಣೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಬಳಿಕ ಬ್ರಾಂಚ್ ಮ್ಯಾನೇಜರ್ ಕೃಷ್ಣ ಕುಲಕರ್ಣಿ ಮಾತನಾಡಿ ಲಲಿತಾ ಜುವೆಲರ್ಸ್ ಲಲಿತಾ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಹಿಂದೆಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಇಂದು ನಮ್ಮ ನಿರ್ದೇಶಕರ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಸುಮಾರು 500 ಕಿಟ್ ವಿತರಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಸಿಟ್ಟೆಂಟ್ ಬ್ಯೂಸಿನೆಸ್ ಮ್ಯಾನೆಜರ್ ಶಶಿದರ್, ಹೆಚ್ ಆರ್ ಸಂತೋಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು….