ವಿಜಯಪುರ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಮನವಿ

ಕರ್ನಾಟಕ ರಾಜ್ಯ ಸರ್ಕಾರ ಶ್ರೀ ಗಜಾನನ ಉತ್ಸವ ಆಚರಣೆ ನಿರ್ಭಂಧ ವಿಧಿಸುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಶ್ರೀ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕ ಗಣೇಶೋತ್ಸವವನ್ನು ಕೋವಿಡ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ , ಸಾಮಾಜಿಕ ಅಂತರ , ಸ್ಯಾನಿಟೃಸರು,ಮಾಸ್ಕ್ ಬಳಿಸಿ ಅತ್ಯಂತ ಸರಳವಾಗಿ ಆಚರಿಸುವುವ ಕಾರಣ ಸಾರ್ವಜನಿಕ ಗಣೇಶೋತ್ಸವ ಆಚರಣೆ ಅನುಮತಿ ನೀಡು ಬೇಕಾಗಿ ಶ್ರೀ ಗಜಾನನ ಉತ್ಸವ ಮಹಾಮಂಡಳ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ವೃತ್ತ ವಿಜಯಪುರ ವತಿಯಿಂದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವ ಶ್ರೀ ಅಪ್ಪು ಪಟ್ಟಣಶೆಟ್ಟಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾಮಂಡಳದ ಮಾಜಿ ಅಧ್ಯಕ್ಷರುಗಳಾದ  ಗೋಪಾಲ ಘಟಕಾಂಬಳೆ ,  ಶಿವಾಜಿ ಪಾಟೀಲ, ಮಹೇಶ ಜಾಧವ ,  ವಿಜಯ ಕೊವ್ವಳ್ಳಿ ,  ರವಿ ಮುರ್ಕತಿಹಾಳ,  ಸಿದ್ದು ಮಲ್ಲಿಕಾರ್ಜುನಮಠ ,  ರಾಜು ಸುರ್ಯವಂಶಿ ,  ವಿಜಯ ಜೋಶಿ ,  ವಿನಾಯಕ ದಹಿಂಡೆ , ಸಚೀನ ಅಡಕಿ , ಸನ್ನಿ ಗಾವಿಮಠ , ಶ್ರೀ ಗುರು ದೇಶಪಾಂಡೆ ,  ಕಾಂತು ಶಿಂಧೆ , ಸಂತೋಷ್ ಜಾಧವ , ರಾಮಚಂದ್ರ ಚವ್ಹಾಣ ಹಾಜರಿದ್ದರು.

 

Related Posts

Leave a Reply

Your email address will not be published.