ವಿಹಿಂಪ ವತಿಯಿಂದ ಕೋವಿಡ್ ವಾರಿಯರ್ಸ್‌ಗಳಿಗೆ ಅಭಿನಂದನೆ
ಮಂಗಳೂರು: ವಿಶ್ವಹಿಂದು ಪರಿಷತ್ತು ಬಜರಂಗದಳ ಸುರತ್ಕಲ್ ಪ್ರಖಂಡ ಇದರ ಆಶ್ರಯದಲ್ಲಿ ಕೋವಿಡ್ ಕಾಲದಲ್ಲಿ ವಾರಿಯರ್ಸ್‌ಗಳಾಗಿ ಶ್ರಮವಹಿಸಿದ ವೈದ್ಯರುಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮವು ಮುಕ್ಕ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತು ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮಾತನಾಡಿ ವಿಶ್ವವು ಕೋವಿಡ್ ಮಹಾಮಾರಿಯಿಂದ ಸಾಕಷ್ಟು ಸಾವು ನೋವನ್ನು ಅನುಭವಿಸಿದ್ದೇವೆ. ಇಂತಹ ಸಂದರ್ಭಗಳಲ್ಲಿ ಒಂದನೇ, ಎರಡನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಇದಕ್ಕೆಲ್ಲಾ ಮೂಲ ಕಾರಣ ವೈದ್ಯರು, ಆರೋಗ್ಯ ಕಾರ್ಯಕರ್ತರ ಶ್ರಮ ಅವಿರತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್, ಮುಕ್ಕ ಶ್ರೀನಿವಾಸ್ ಮೆಡಿಕಲ್ ಕಾಲೇಜ್ ಡೀನ್ ಡಾ. ಉದಯ್ ಕುಮಾರ್ ರಾವ್, ಶ್ರೀನಿವಾಸ್ ಆಸ್ಪತ್ರೆ ಮೆಡಿಕಲ್ ಸುಪೀರಿಯಟೆ೦ಡೆ೦ಟ್ ಡಾ. ವಿನೋದ್ ಪ್ರೇಮ್ ಸಿಂಗ್, ವಿಶ್ವಹಿಂದೂ ಪರಿಷತ್ತು ಬಜರಂಗದಳ ಸುರತ್ಕಲ್ ಪ್ರಖಂಡ ಉಪಾಧ್ಯಕ್ಷ ರಘು ಡಿ ಕೋಟ್ಯಾನ್, ವಿಶ್ವಹಿಂದೂ ಪರಿಷತ್ ಬಜರಂಗದಳ ಸುರತ್ಕಲ್ ಪ್ರಖಂಡ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಮನಪಾ ಸದಸ್ಯರುಗಳಾದ ವರುಣ್ ಚೌಟ, ಶೋಭಾ ರಾಜೇಶ್, ಸರಿತಾ ಶಶಿಧರ್ ಉಪಸ್ಥಿತರಿದ್ದರು.