ಸಕಲೇಶಪುರದ ದೋಣಿಗಾಲ್ ಎಂಬಲ್ಲಿ ಭೂಕುಸಿತ:ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ವಾಹನಗಳಿಗೆ ತಡೆ

ಗುಂಡ್ಯ: ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಬಳಿ ಭೂಕುಸಿತವಾಗಿದೆ.


ಬೆಂಗಳೂರು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪ್ರಸಿದ್ದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ, ಸೌತ್ತಡ್ಕ ಕ್ಷೇತ್ರಕ್ಕೆ ಭೇಟಿ ನೀಡುವ ವಾಹನದ ಚಾಲಕರು ಪರಾಡುತ್ತಿರುವ ಮಾಹಿತಿ ಲಭಿಸಿದೆ. ಇನ್ನು ಮುಂಜಾಗೃತವಾಗಿ ಗುಂಡ್ಯ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳಿಗೆ ತಡೆ ನೀಡಲಾಗುತ್ತಿದು ಬದಲಿ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಮಾಹಿತಿ ನೀಡಲಾಗುತ್ತಿದೆ. ಭೂಕುಸಿತವಾದ ಸ್ಥಳದಲ್ಲಿ ರಸ್ತೆ ಸರಿಪಡಿಸುವ ಕಾರ್ಯಾಚರಣೆ ಆರಂಭಗೊಂಡಿದೆ. ಅಧಿಕಾರಿಗಳ ತಂಡವೂ ಆಗಮಿಸಿದೆ.

 

Related Posts

Leave a Reply

Your email address will not be published.