ಬೈತಡ್ಕ ಕಾರು ದುರಂತ – ಎರಡನೇ ಮೃತದೇಹವೂ ಪತ್ತೆ
ಬೈತಡ್ಕ ಕಾರು ಹೊಳೆಗೆ – ಎರಡನೇ ಮೃತದೇಹವೂ ಪತ್ತೆ.
ಪುತ್ತೂರು : ಕಾಣಿಯೂರು ಹೊಳೆಯಲ್ಲಿ ಒಂದು ಮೃತದೇಹ ಇಂದು ( ಜು 12 ರಂದು ) ಬೆಳಿಗ್ಗೆ ಪತ್ತೆಯಾಗಿದ್ದರೆ , ಅದರ ಅರ್ಧ ಗಂಟೆಯ ಬಳಿಕ ಎರಡನೇ ಮೃತದೇಹವೂ ಪತ್ತೆಯಾಗಿದೆ.
ಇಂದು ಬೆಳಿಗ್ಗೆ 8 ಗಂಟೆ ಸಮೀಪ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು, ಇದೀಗ ಅದರಿಂದ 50 ಮೀಟರ್ ಹಿಂದೆಯೇ ಎರಡನೇ ಮೃತದೇಹವೂ ಪತ್ತೆಯಾಗಿದೆ. ಎರಡೂ ಮೃತದೇಹಗಳು ಊರಿನವರಿಗೆ ಸಿಕ್ಕಿದ್ದು. ಘಟನೆ ನಡೆದು ಮೂರನೇಯ ದಿನ ಪತ್ತೆಯಾಗಿದೆ.
ಜು. 10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಧನುಷ್ ಹಾಗೂ ವಿಟ್ಲ ಕನ್ಯಾನದ ಧನುಷ್ ನೀರು ಪಾಲಾಗಿದ್ದರು. ಈ ಯುವಕರಿಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರು ಜು.10ರಂದೇ ಮಧ್ಯಾಹ್ನ ಪತ್ತೆ ಹಚ್ಚಲಾಗಿತ್ತು. ಎಸ್ ಡಿ ಆರ್ ಎಫ್ ಎರಡು ದಿನ ಹುಡುಕಾಡಿದರೂ ದೇಹಗಳು ಪತ್ತೆಯಾಗಿರಲಿಲ್ಲ. ಇದೀಗ ಮಳೆ ಕಡಿಮೆ ಆಗಿ ಹೊಳೆಯಲ್ಲಿ ನೀರು ಕಡಿಮೆಯಾದಗ ಮೃತದೇಹಗಳು ಪತ್ತೆಯಾಗಿವೆ.