ಎಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ “ಸ್ಕಿಲ್ ಅಪ್” ಕಾರ್ಯಕ್ರಮ
ಮಂಗಳೂರು: ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ “ಸ್ಕಿಲ್ ಅಪ್” ಎಂಬ ಒಂದು ನಿರ್ವಹಣೆ ವಿಕಸನ ಕಾರ್ಯಕ್ರಮವನ್ನು 2023 ರ ಸೆಪ್ಟೆಂಬರ್ 23 ರಂದು ಆಯೋಜಿಸಿತು.
ಈ ಕಾರ್ಯಕ್ರಮವು ಆರೋಗ್ಯ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ನಿರ್ದಿಷ್ಟ ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಬಗ್ಗುಟ್ಟಿತು.
. “ಸ್ಕಿಲ್ ಅಪ್” ಎಂಬ ಈ ಪದವು ಏರಡು ಅವಧಿಗಳನ್ನು ಒಳಗೊಂಡಿರುವ ಒಂದು ಶ್ರೇಣೀಕೃತ ನಿರ್ವಹಣಾ ವಿಕಸನ ಕಾರ್ಯಕ್ರಮ ಆಗಿದೆ: ಮೊದಲನೆಯದಾಗಿ, ಆರೋಗ್ಯ ಸಂಸ್ಥೆಗಳ ಸುಸ್ಥಿರತೆ ಮತ್ತು ಎರಡನೇಯದಾಗಿ ಸಂಸ್ಥೆಗಳ ಸಂಘಟನಾ ರಚನೆಗಳು ಮತ್ತು ಎದುರಿಸುವ ಸಮಸ್ಯೆಗಳ ಪರಿಹಾರಗಳು.
ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಶ್ರೀ ಎಚ್ ಪ್ರಶಾಂತ್ ಮಿರಾಂಡ ಹಾಗೂ ಎಂಡಿಪಿ ನಿರ್ದೇಶಕ ಪ್ರೊ.ವೆಂಕಟೇಶ್ ಅಮೀನ್ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರಿನ ಡೀನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕಾರ್ಯಕ್ರಮವನ್ನು ಶ್ರೀ ಹ್ಯಾರಿ ಪ್ರಶಾಂತ್ ಮಿರಾಂಡ ಮತ್ತು ಪ್ರೊಫೆಸರ್ ವೆಂಕಟೇಶ್ ಶೇಖರ್ ಅಮಿನ್, ಪ್ರೊಫೆಸರ್ ಡಾಕ್ಟರ್ ಅಮೀತ ಪಿ. ಮಾರ್ಲಾ, ಡಾಕ್ಟರ್ ಶಾಶ್ವತ್ ಎಸ್, ಏ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ವಹಣೆಗಾರ ಮತ್ತು ಪ್ರೊಫೆಸರ್ ವಿಜಯ ಪಿ, ಏ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಾಧಿಕಾರಿ ಉದ್ಘಾಟಿಸಿದರು. ಶ್ರೀಮತಿ ಪ್ರಿಮ್ ರೋಸ್ ವಿಷ್ಣು ಏ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ನ ಸಹಾಯಕ ಉಪಾಧ್ಯಾಯಿ ಸ್ವಾಗತಿಸಿದರು. “ಆಪಲೋ ಪ್ರೋಟಾನ್ ಕ್ಯಾನ್ಸರ್ ಸೆಂಟರ್, ಚೆನ್ನೈ, ಆಥರ್ವ ಆರ್ಥೋ ಕೇರ್ ಮಂಗಳೂರು, ಕ್ರಿಸ್ಚಿಯನ್ ಮೆಡಿಕಲ್ ಕಾಲೇಜು, (ಸಿಎಂಸಿ) ವೇಲೂರು, ಟಿಎನ್, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ, ಉಡುಪಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ದೆರೆಲಕಟ್ಟೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ಥಂಬಯ್, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಟವಾರ್, ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ರಾಜಗಿರಿ ಆಸ್ಪತ್ರೆ ಬೆಂಗಳೂರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರು, ರಾಮಯ್ಯ ಯೂನಿವರ್ಸಿಟಿ ಆಫ್ ಆಪ್ಲೈಡ್ ಸೈನ್ಸೆಸ್ ಬೆಂಗಳೂರು, ಶ್ರೀ ರೇಂಗ ಆಸ್ಪತ್ರೆ ಟಿಎನ್, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ಯೂನಿಟಿ ಆಸ್ಪತ್ರೆ ಮಂಗಳೂರು, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಇವರಿಂದ ಸಭಿಕರು ಭಾಗವಹಿಸಿದ್ದರು. ಶ್ರೀ ಶಶಧರ ಆಚಾರ್ಯ, ಏ. ಜೆ ಹುಮನ್ ರಿಸೋರ್ಸ್ ನ ಮ್ಯಾನೇಜರ್, ಮನ್ಯಸ್ತರ ಸಭೆಗೆ ಆಭರ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಹೆಚ್ಚಿನ ಗೌರವವನ್ನು ಗಳಿಸಿತು. ಕಾರ್ಯಕ್ರಮದ ಪರಿಣಾಮವನ್ನು ಗ್ರಹಿಸಲಾಯಿತು. ಪ್ರತಿಷ್ಠಿತ ಸಭಿಕರು ಸಕಾರಾತ್ಮಕವಾಗಿ ಪ್ರತಿಸ್ಪಂದಿಸಿದರು. ಈ ಕಾರ್ಯಕ್ರಮವು ನೀತಿನಿರ್ಧಾರಕರಿಗೆ, ನಿರ್ದೇಶಕರಿಗೆ, ವ್ಯಾಪಾರ ಮತ್ತು ನಿರ್ವಾಹಕ ನಾಯಕರಿಗೆ, ನಿರ್ವಾಹಕರಿಗೆ, ಮತ್ತು ಆರೋಗ್ಯ ವೈದ್ಯಕೀಯ ವಿಶೇಷಜ್ಞರಿಗೆ ಸಂವಾದ ಮಾಡಲು ಹಾಗೂ ನೆಟ್ವರ್ಕ್ ಮಾಡಲು ಅವಕಾಶ ನೀಡಿತು.