ಉಡುಪಿ: ಬನ್ನಂಜೆ ಬಿಲ್ಲವ ಸಂಘಕ್ಕೆ ನಿಂದನೆ: ಕ್ರಮಕ್ಕೆ ಒತ್ತಾಯಿಸಿ ಎಸ್‍ಪಿಗೆ ಮನವಿ
ಉಡುಪಿಯ ಬನ್ನಂಜೆ ಬಿಲ್ಲವ ಸಂಘದ ವಿರುದ್ದ ಕಿಡಿಗೇಡಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದ್ದು, ಬಿಲ್ಲವ ಸಮಾಜ ಬಾಂಧವರು ಇದರಿಂದ ಆಕ್ರೋಶ ಗೊಂಡಿದ್ದು, ಕೃತ್ಯ ಎಸಗಿದ ವ್ಯಕ್ತಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ, ಉಡುಪಿ ಪೆÇಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.