ಭಾಜೋನ್ಯಾಯಾ ಅಸ್ಸಾಂ ಯಾತ್ರೆ ರಾಹುಲ್ ಗಾಂಧಿಯಿಂದ ಮತ್ತೆ ಬಿಜೆಪಿ ಖಂಡನೆ
ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಗೌಹತಿಯಲ್ಲಿ ಪೋಲೀಸರು ರಾಹುಲ್ ಗಾಂಧಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದರೂ, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಭಾರತ್ ಜೋಡೋ ನ್ಯಾಯ ಯಾತ್ರೆಯು ಬುಧವಾರ ಬಾರ್‍ಪೇಟ್‍ನತ್ತ ಮುನ್ನಡೆಯಿತು.
ರಾಹುಲ್ ಗಾಂಧಿ ಅವರಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮೊದಲಾದವರ ವಿರುದ್ಧ ಹಿಂಸೆಗೆ ಪ್ರಚೋದನೆ, ಉದ್ದೇಶಪೂರ್ವಕ ಟ್ರಾಫಿಕ್ ಜಾಮ್, ಸಾರ್ವಜನಿಕ ಆಸ್ತಿಗೆ ಹಾನಿ ಎಂದೆಲ್ಲ ಅಸ್ಸಾಂ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಯಾತ್ರೆ ಮುಂದುವರಿಸುತ್ತ ಮಾತನಾಡಿದ ರಾಹುಲ್ ಗಾಂಧಿಯವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ದೇಶದಲ್ಲೇ ಅತಿ ದೊಡ್ಡ ಭ್ರಷ್ಟ. ಅವರ ಕೆಲಸ ದ್ವೇಷ ಹರಡುವುದು ಮಾತ್ರ ಎಂದು ಟೀಕಿಸಿದ್ದಾರೆ. ಯಾತ್ರೆ ಕೊನೆಗೊಳಿಸಲು ಬಿಜೆಪಿ ಅಡ್ಡ ತಂತ್ರ ನಡೆಸುತ್ತಿದೆ. ಆದರೆ ಇದಕ್ಕೆಲ್ಲ ಭಾರತ್ ಜೋಡೋ ನ್ಯಾಯ ಯಾತ್ರೆಯವರು ಹೆದರುವುದಿಲ್ಲ ಎಂದು ಸಹ ಹೇಳಿದರು.