ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ : ಮಾಜಿ ಸಚಿವ ಅಭಯಚಂದ್ರ ಜೈನ್
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನ ಪರ ಯೋಜನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಅಭಿವೃದ್ಧಿ, ಬಡತನ ನಿರ್ಮೂಲನೆಗೆ ಪ್ರಾಶಸ್ತ್ಯವಿತ್ತು. ಆದ್ದರಿಂದಲೇ ಬಿಜೆಪಿ ಕಾಲಘಟ್ಟದಲ್ಲಿ ಯಾವ ಯೋಜನೆಗಳೂ ಬಾರದಿದ್ದರೂ, ಭಾವನಾತ್ಮಕವಾಗಿ ಅವರು ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಈ ಬಾರಿ ಹುರುಪಿನಿಂದ ಕಾರ್ಯಕರ್ತರು ಕೆಲಸ ಮಾಡಿ ಕಾಂಗ್ರೆಸ್ ಅನ್ನು ದ.ಕ.ಜಿಲ್ಲೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.