ನಾಗಾರ್ಜುನ ಸಾಗರ ನೀರಿಗಾಗಿ ಹಣಾಹಣಿ
ಆಂಧ್ರ ಮತ್ತು ತೆಲಂಗಾಣದ ನಡುವೆ 66% ಮತ್ತು 34% ನಾಗಾರ್ಜುನ ಸಾಗರ ನೀರಿನ ಹಂಚಿಕೆ ಒಪ್ಪಂದ ಆಗಿದೆ. ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮಾದರಿಯ ಗಲಾಟೆ ಆಂಧ್ರ ಮತ್ತು ತೆಲಂಗಾಣದ ನಡುವೆ ನಡೆದಿದೆ. ಕೃಷ್ಣ ನದಿಗೆ ಕಟ್ಟಿರುವ ನಾಗಾರ್ಜುನ ಸಾಗರವು ಆಂಧ್ರವು ವಿಭಜನೆಗೊಂಡ ಬಳಿಕವೂ ಭಾರೀ ವಿವಾದಕ್ಕೆ ಏನೂ ಕಾರಣವಾಗಿಲ್ಲ.
ಆದರೆ ತೆಲಂಗಾಣದಲ್ಲಿ ಮತದಾನ ನಡೆಯುವ ದಿನ ಆಂಧ್ರದ 700 ಪೋಲೀಸರು ನುಗ್ಗಿ ಬಂದು ನಾಗಾರ್ಜುನ ಸಾಗರ ಅಣೆಕಟ್ಟಿನಿಂದ ನೀರು ಬಿಟ್ಟುಕೊಂಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ನಾಲ್ಕೈದು ದಿನಗಳಿಂದ ಜನರು ಬೀದಿಗಿಳಿದು ಹೋರಾಟ ಎನ್ನುತ್ತಿದ್ದಾರೆ. ಈ ಸಂಬಂಧ ಮತ್ತಷ್ಟು ದಿನ ವಿವಾದವು ಈಗ ಆಂಧ್ರ ತೆಲಂಗಾಣಗಳ ರಾಜಕೀಯ ಸಂಬಂಧದ ಮೇಲೂ ಪರಿಣಾಮ ಬೀರುತ್ತಿದೆ. ಆಂಧ್ರ ಮತ್ತು ತೆಲಂಗಾಣ ಪೋಲೀಸರು ಪರಸ್ಪರ ಲಾಠಿ ಬೀಸಿಕೊಂಡ ಮೇಲೆ ಎರಡೂ ರಾಜ್ಯಗಳು ಈ ಸಂಬಂಧ ಮಾತುಕತೆ ನಡೆಸಲು ಒಪ್ಪಿಕೊಂಡಿವೆ.