ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಂದ ರೋಡ್ ಶೋ
ಪುತ್ತೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 4 ದಿನ ಬಾಕಿ ಉಳಿದಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರವಾಗಿ ಇಂದು ಈಶ್ವರ ಮಂಗಲದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಲಾಯಿತು.ಈ ವೇಳೆ ಮುರಳೀಧರ ರೈ ಮಠಂತಬೆಟ್ಟು, ಅಬ್ದುಲ್ ರಹಮಾನ್ ಹಾಜಿ, ಎಂ ಬಿ ವಿಶ್ವನಾಥ ರೈ, ಮಹಮ್ಮದ್ ಬಡಗನ್ನೂರು, ಶ್ರೀ ಪ್ರಸಾದ್ ಪಾಣಾಜೆ, ಕಾವು ಹೇಮನಾಥ ಶೆಟ್ಟಿ, ಕೃಷ್ಣ ಪ್ರಸಾದ್ ಆಳ್ವ,ಮತ್ತಿತರರು ಉಪಸ್ಥಿತರಿದ್ದರು. ನೂರಾರು ಜನರು ರೋಡ್ ಶೋ ನಲ್ಲಿ ಭಾಗವಹಿಸಿದರು.