ಮಂಗಳೂರು: ಅಶೋಕನಗರದ ಸ್ಪಂದನ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಸ್ಪಂದನ ಫ್ರೆಂಡ್ಸ್ ಅಶೋಕನಗರ ಮಂಗಳೂರು ಇದರ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಮ ಕಿರೋಡಿಯನ್ ರಸ್ತೆಯ ಮುಂಭಾಗದಲ್ಲಿ ಆಚರಿಸಲಾಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಜೋಸ್ಸಿ ಸೋನ್ಸ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಾಮ ಕಿರೋಡಿಯನ್ ರಸ್ತೆ ಅಶೋಕ ನಗರ ಇಲ್ಲಿಯ 2 ತಿರುವುಗಳಲ್ಲಿ ವಾಹನ ಚಾಲಕರ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಟ್ರಾಫಿಕ್ ಮಿರರ್‍ಗಳನ್ನು ಸ್ಪಂದನ ಫ್ರೆಂಡ್ಸ್‍ನ ವತಿಯಿಂದ ಸ್ಥಾಪಿಸಲಾಗಿದ್ದು, ಇದನ್ನು ಸ್ಥಳೀಯ ಉದ್ಯಮಿ ಸತೀಶ್ ಆಳ್ವ ಮುಡಾರೆ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದು, ಸಂಸ್ಥೆಯ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.