ಬಿಡಬ್ಲ್ಯುಎಫ್ ಜೂನಿಯರ್ ವಿಶ್ವ ಚಾಂಪಿಯನ್ ಶಿಪ್‍ಗೆ ರಾಜ್ಯದ ಆಯುಷ್ ಶೆಟ್ಟಿ ಸಾರಥ್ಯ

ಅಮೆರಿಕದಲ್ಲಿ ಸೆಪ್ಟಂಬರ್ 25ರಿಂದ ಆರಂಭವಾಗಲಿರುವ ಬಿಡಬ್ಲ್ಯುಎಫ್ ಜೂನಿಯರ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ 16 ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಆಯುಷ್ ಶೆಟ್ಟಿ ಹಾಗೂ ಉನ್ನತಿ ಹೂಡಾ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.
ಆಟಗಾರರ ಆಯ್ಕೆಗೆ ಜುಲೈ 26ರಿಂದ 29ರ ವರೆಗೆ ಆಯ್ಕೆ ಟ್ರಯಲ್ಸ್ ನಡೆಸಲಾಗಿತ್ತು. ಎರಡು ಬಾರಿ 19 ವಯೋಮಿತಿ ಅಖಿಲ ಭಾರತ ಜ್ಯೂನಿಯರ್ ರ್ಯಾಂಕಿಂಗ್ ಚಾಂಪಿಯನ್ ಆಗಿರುವ ಮಂಗಳೂರು ಮೂಲದ ಆಯುಷ್ ಶೆಟ್ಟಿ ಟ್ರಯಲ್ಸ್‍ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಟೂರ್ನಿಯಲ್ಲಿ ತಂಡವನ್ನು ಮುನ್ನೆಡೆಸುವ ಅವಕಾಶ ಪಡೆದುಕೊಂಡಿದ್ದಾರೆ. ಜೂನಿಯರ್ ವಿಶ್ವ ರ್ಯಾಂಕಿಂಗ್‍ನಲ್ಲಿ ಏಳನೇ ಸ್ಥಾನ ಪಡೆದಿರುವ ತಾರಾ ಷಾ ಹಾಗೂ ದೇವಿಕಾ ಸಿಂಗ್ ಅವರನ್ನೊಳಗೊಂಡ ಬಾಲಕಿಯರ ತಂಡದ ನೇತೃತ್ವವನ್ನು ಉನ್ನತಿ ಹೂಡಾ ವಹಿಸಲಿದ್ದಾರೆ.
