ಬೈಂದೂರು ಧಾರಾಕಾರ ಮಳೆ : ಸ್ಥಳದಲ್ಲಿ ಬೀಡುಬಿಟ್ಟ ಕಂದಾಯ ಇಲಾಖೆ, ಅಗ್ನಿಶಾಮಕ ದಳ

ಎರಡು ದಿನಗಳಿಂದ ಭಾರಿ ಮಳೆ ಹಿನ್ನೆಲೆ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡದ ಅಂಚಿನಲ್ಲಿರುವ ಶಿರೂರು ಬೈಂದೂರು ಕಳುಹಿತ್ಲು ಕಲ್ಮಕ್ಕಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಯಾವುದೇ ಸಂಪರ್ಕವಿಲ್ಲದೆ ಜನ ಕಂಗೆಟ್ಟಿದ್ದಾರೆ ಭಾರೀ ಮಳೆಯಿಂದಾದ್ದು ರಾತ್ರಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ ,ರಾಜ್ಯ ಹೆದ್ದಾರಿ ಸಂಪೂರ್ಣ , ಕೆಲವು ಶಾಲೆಯ ಎದುರುಗಡೆ ಮುಳುಗಡೆಯಾಗಿದೆ ಯಾವುದೇ ವಾಹನ ಸಂಚಾರ ಇಲ್ಲದೆ ಸ್ಥಗಿತಗೊಂಡಿದೆ.

ಹಲವಾರು ಮನೆಗಳು ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.ಕುಂದಾಪುರ ಮತ್ತು ಬೈಂದೂರು ತಾಲೂಕಿಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ನದಿಯ ತೀರದಲ್ಲಿರುವ ದೋಣಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ. ಸುಮಾರು 30ಕ್ಕೂ ಹೆಚ್ಚು ದೋಣಿಗಳು ಹಾನಿಗೀಡಾದ ಹಾನಿಗೊಳಗಾದ ಪ್ರದೇಶಗಳಿಗೆ ಬೈಂದೂರು ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರು ರಾತ್ರಿಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ ಅವರ ಜೊತೆ ಅಗ್ನಿಶಾಮದಳ ಕಂದಾಯ ಇಲಾಖೆ ಕಾರ್ಯಪ್ರವೃತ್ತರಾಗಿದ್ದಾರೆ.