ಬೈಂದೂರು: ಅಶಕ್ತರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು: ಜಾತ್ರೆಗಳಲ್ಲಿ ವೇಷ ಹಾಕಿ ಹಣ ಸಂಗ್ರಹ
ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಲ್ಲಿ ಅಶಕ್ತರ ಚಿಕಿತ್ಸಾ ಸಹಾಯಾರ್ಥವಾಗಿ ಹಣ ಸಂಗ್ರಹಿಸುವ ಮೂಲಕ ಅಶಕ್ತಿರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು ಅವರು.
ಬೆಂಕಿ ಮಣಿ ಸಂತು ಅಶಕ್ತರ ಚಿಕಿತ್ಸಾ ಸಹಾಯರ್ಥ ವಿಶೇಷ ವೇಷ ಧರಿಸಿ ಹಣಸಂಗ್ರಹಣೆ ಮಾಡುತ್ತಿರುವುದು ಇದೆ ಮೊದಲೇನಲ್ಲ… ಅದೆಷ್ಟೋ ಅನಾರೋಗ್ಯ ಪೀಡಿತರಿಗೆ ವಿವಿಧ ಜಾತ್ರೆಯಲ್ಲಿ ವೇಷ ಹಾಕುವುದರ ಮೂಲಕ ಹಣವನ್ನು ಸಂಗ್ರಹಿಸಿಕೊಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಬಾರಿ ಬೆಂಕಿ ಮಣಿ ಸಂತು ಅವರು ಪುತ್ರ ಚಿರಾಯು ವಿಶೇಷ ವೇಷವನ್ನು ಧರಿಸಿ ಇನ್ನೊಬ್ಬರ ಜೀವವನ್ನು ಉಳಿಸಲು ಗಲ್ಲಿ ಗಲ್ಲಿಯಲ್ಲಿ ಸಂಚರಿಸಿ ಹಣ ಸಂಗ್ರಹ ಮಾಡಿದ್ದಾರೆ. ಕಿಡ್ನಿ ವೈಫೈಲದಿಂದ ಬಳಲುತ್ತಿರುವ ಸುಬ್ರಮಣ್ಯ ಎನ್ನುವ 20 ವರುಷದ ಯುವಕನ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಿದ್ದಾರೆ.
ತಂದೆ ಮತ್ತು ಮಗನ ಈ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರ ಕೈಯಲ್ಲಾಗುವ ಸಹಾಯವನ್ನು ಮಾಡಿದ್ದಾರೆ.