ಮಂಜೇಶ್ವರ: ಬಿ ಸ್ಮಾರ್ಟ್ ಲೀಡರ್ಸ್ ಅಕಾಡೆಮಿ ಸಮ್ಮಿಲನ
ಮಂಜೇಶ್ವರ : ಮಂಜೇಶ್ವರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಬಿ ಸ್ಮಾರ್ಟ್ ಲೀಡರ್ಸ್ ಅಕಾಡೆಮಿ ಸಮ್ಮಿಲನ ಮಚ್ಚಂಪ್ಪಾಡಿ ಮದ್ರಸದಲ್ಲಿ ನಡೆಯಿತು. ಪಿ. ಎಚ್.ಅಬ್ದುಲ್ ಹಮೀದ್ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಅಬ್ದುಲ್ ಬಾಸಿತ್ ಹುದವಿ ಪ್ರಾರ್ಥನೆಗೈದರು. ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಮುಶಾವರ ಸದಸ್ಯ ಅಬ್ದುಲ್ ಮಜೀದ್ ದಾರಿಮಿ ಪಯ್ಯಕ್ಕಿ ಸಭೆಯನ್ನು ಉದ್ಘಾಟಿಸಿದರು.
ಅಬ್ದುಲ್ ಅಝೀಝ್ ಹಾಜಿ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು.ರಶೀದ್ ಮಾಸ್ತರ್ ಬೆಲಿಂಜ, ಸಮಸ್ತ ಮುಫತ್ತಿಶ್ ಅಬ್ದುಲ್ ಖಾದರ್ ಫೈಝಿ ಮ್ಯಾನೇಜಿಂಗ್ ಕಮಿಟಿಯ ಬಾಧ್ಯತೆ ಹಾಗೂ ಕರ್ತವ್ಯ ಎಂಬ ವಿಷಯಗಳಲ್ಲಿ ತರಗತಿ ನಡೆಸಿಕೊಟ್ಟರು. ಮುಹಮ್ಮದ್ ಫೈಝಿ ಕಜೆ ,ಫಾರೂಕ್ ಮುಸ್ಲಿಯಾರ್ , ಹಾರಿಸ್ ಪಾವೂರು ಸೇರಿದಂತೆ ಹಲವು ಗಣ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು