ಬೈಂದೂರು: ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ
ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೈಂದೂರು ಆಶ್ರಯದಲ್ಲಿ ಮೊಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಂದೂರು ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,
ಎಲ್ಲಾ ಶಾಲೆಯ ಮಕ್ಕಳಿಗೆ ಗೆಲ್ಲಲು ಸ್ಫೂರ್ತಿ ನೀಡುವ ಮಾತುಗಳೊಂದಿಗೆ ಮಕ್ಕಳಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರು ಶ್ರೀಯುತ ಮಂಜುನಾಥ ದೇವಾಡಿಗ- ಕಾರ್ಯಕ್ರಮದ ಅಧ್ಯಕ್ಷರು ವಹಿಸಿ ಮಾತನಾಡಿ, ಉತ್ತಮ ಶಿಕ್ಷಣವನ್ನು ನೀಡುತ್ತಾ ಬರುತ್ತಿದ್ದೇವೆ ಇಂದು ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವನ್ನು ಹಮ್ಮಿಕೊಂಡಿದ್ದೇವೆ ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಕಂಬದಕೋಣೆ ಶಿಕ್ಷಣ ಸಂಯೋಜಕರು ಸತ್ಯನಾರಾಯಣ ಕೊಡೇರಿ, ಪ್ರಾಥವಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಜಯಾನಂದ ಪಟಗಾರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ರಾಮಯ್ಯ ದೇವಾಡಿಗ, ಓಂ ಕಲಾ ತಂಡದ ಅಧ್ಯಕ್ಷರು ರಮೇಶ ಗಾಣಿಗ, ಪ್ರಧಾನ ಪೆÇೀಷಕರು ಮಂಜು ದೇವಾಡಿಗ,ಉಪ್ಪುಂದದ ದೈಹಿಕ ಶಿಕ್ಷಕರಾದ ನಿತ್ಯಾನಂದ ಸರ್, ಸ.ಹಿ.ಪ್ರಾಶಾಲೆ ಮೊಗೇರಿ ಯ ದೈಹಿಕ ಶಿಕ್ಷಕರಾದ ಶ್ರೀಮತಿ ಪ್ರೇಮಾ ನಾಯ್ಕ ವಿವಿಧ ಶಾಲೆಯ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿಯಾದ ಶ್ರೀಮತಿ ಸಹನಾ.ಜಿ ನಿರೂಪಿಸಿದರು. ಶಿಕ್ಷಕಿಯಾದ ಶ್ರೀಮತಿ ವಸಂತಿ.ಕೆ. ವಂದಿಸಿದರು.