ಅಜ್ಜಿಯ ಮನೆ ನಿರ್ಮಾಣಕ್ಕೆ ಬೇಕಿದೆ ಸಂಕಲ್ಪ

ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು ನಿವಾಸಿ ಚಂದು ಪೂಜಾರ್ತಿ (73) ಎನ್ನುವ ಇಳಿ ವಯಸ್ಸಿನ ಅಜ್ಜಿ ಏಕಾಂಗಿ ಆಗಿ ಬದುಕುತ್ತಿದ್ದು ಅವರ ವಾಸದ ಮನೆ ಶಿಥಿಲಾವಸ್ಥೆಯಲ್ಲಿದೆ ಅಜ್ಜಿಗೊಂದು ಸೂರೊಂದನ್ನು ಕಲ್ಪಿಸುವ ಕಾರ್ಯಕ್ಕೆ ಸಮಾಜ ಬಾಂಧವರುಮ,ದಾನಿಗಳು ಕೈ ಜೋಡಿಸಬೇಕಾಗಿದೆ.ನಾಡ ಗ್ರಾಮದ ತೆಂಕಬೈಲು ಗೋಳಿಹಕ್ಲು 5.ಸೆಂಟ್ಸ್ ಕಾಲೋನಿಯಲ್ಲಿ ವಾಸಮಾಡುತ್ತಿರುವ ಚಂದು ಅಜ್ಜಿಗೆ ಮಕ್ಕಳಿಲ್ಲ,ಅವರ ಪತಿ ನಿಧನರಾಗಿ 30 ವರ್ಷಗಳು ಕಳೆದು ಹೋಗಿದೆ ಕಳೆದ 30 ವರ್ಷಗಳಿಂದ ಒಬ್ಬಂಟಿಯಾಗಿ ಅಜ್ಜಿ ವಾಸಮಾಡುತ್ತಿದ್ದಾರೆ.ಮಣ್ಣಿನ ಇಟ್ಟಿಗೆಯಿಂದ ಕಟ್ಟಿದ ಸಣ್ಣ ಮನೆ ಸಂಪೂರ್ಣ ದುರಾವಸ್ಥೆಯಲ್ಲಿದೆ,ಹಾವು,ಚೇಳು ಮನೆ ಒಳಗೆ ಹೊಗ್ಗದಂತೆ ರಕ್ಷಣೆಗೆ ಕಿಟಕಿ ಬಾಗಿಲುಗಳಿಲ್ಲ,ಮನೆ ಎದುರುಗಡೆ ತೆಂಗಿನ ಗರಿಯ ತಟ್ಟಿಯನ್ನು ಕಟ್ಟಲಾಗಿದೆ,ದುಸ್ಥಿಯಿಂದ ಕೂಡಿದ್ದ ಮನೆ ಯಾವುದೇ ಕ್ಷಣದಲ್ಲಾದರೂ ಉದುರಿ ಬೀಳುವ ಪರಿಸ್ಥಿಯಲ್ಲಿದೆ,ಮನೆ ಮೇಲಿನ ಮಾಡಿಗೆಗೆ ಸ್ಥಳೀಯರ ಸಹಕಾರದಿಂದ ಟಾರ್ಪಲ್ ಹೋದಿಕೆಯನ್ನು ಹಾಕಲಾಗಿದೆ.

ಇಳಿ ವಯಸ್ಸಿನಲ್ಲಿ ಯಾತನೆಯ ಬದುಕನ್ನು ನಡೆಸುತ್ತಿರುವ ಚೆಂದು ಅಜ್ಜಿಗೆ ಮನೆಯೊಂದು ಕಲ್ಪಿಸಿ ಕೊಡುವ ಸಂಕಲ್ಪ ನಾಗರಿಕ ಸಮಾಜ ಮಾಡಬೇಕಾಗಿದೆ.ತಿಂಗಳಿಗೆ ಬರುತ್ತಿರುವ ಸಂಧ್ಯಾ ಸುರಕ್ಷಾ ಹಣದಿಂದ ಅಜ್ಜಿ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ ಸೊಸೈಟಿಯಲ್ಲಿ ಸಿಗುತ್ತಿರುವ ಅಕ್ಕಿಯೇ ಅಜ್ಜಿಯ ಜೀವನಕ್ಕೆ ಆಧಾರವಾಗಿದೆ ಶೌಚಾಲಯದ ವ್ಯವಸ್ಥೆ ಕೂಡ ಅಜ್ಜಿ ಮನೆಯಲ್ಲಿ ಇಲ್ಲ.ಅಜ್ಜಿಯ ಆರೋಗ್ಯವು ಕೂಡ ಹದಗೆಟ್ಟಿದ್ದು ದೈಹಿಕವಾಗಿ ಅಶಕ್ತರಾಗಿದ್ದಾರೆ ಅಧಿಕಾರಿ ವರ್ಗದವರನ್ನು ಸಂಪರ್ಕಿಸಿ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲುವಷ್ಟು ಶಕ್ತರಿಲ್ಲ ಚೆಂದು ಅಜ್ಜಿಗೆ ದಾನಿಗಳ ಸಹಕಾರದ ಅವಶ್ಯಕತೆ ಇದೆ. ಮನೆಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಲೈನ್ ತುಂಡಾಗಿ ಬಿದ್ದು ಎರಡು ವರ್ಷಗಳು ಕಳೆದು ಹೋಗಿದೆ ವಿದ್ಯುತ್ ದೀಪದ ಸೌಲಭ್ಯವಿಲ್ಲದೆ ಕಳೆದೆರಡು ವರ್ಷಗಳಿಂದ ಅಜ್ಜಿ ಕತ್ತಲೆಯಲ್ಲಿ ಬದುಕುನ್ನು ಕಳೆಯುತ್ತಿದ್ದಾರೆ.
ಅಜ್ಜಿಯ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡ ಬಯಸುವವರು ನೆರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಹುದಾಗಿದೆ.
ಹೆಸರು:ಚೆಂದು ಪೂಜಾರ್ತಿ,ಬ್ಯಾಂಕ್ ಹೆಸರು:ಬ್ಯಾಂಕ್ ಆಫ್ ಬರೋಡಾ,
ಖಾತೆಸಂಖ್ಯೆ-81920100008241FSC Code -BARB0VJNADA
ನಿಮ್ಮ ಅಸಹಾಯಸ್ತಕ್ಕಾಗಿ ಚಂದು ಅಜ್ಜಿ