ಕರ್ನಾಟಕ ರಾಜ್ಯ ರೈತಸಂಘ ಪಾಣೆಮಂಗಳೂರು ನೂತನ ಗ್ರಾಮ ಘಟಕ ರಚನೆ ಹಾಗೂ ವಿಚಾರ ಸಂಕೀರಣ
ಮೇಲ್ಕಾರಿನ ಬಿರ್ವ ಸಂಕೀರ್ಣ ದಲ್ಲಿ ರಾಜ್ಯ ರೈತ ಸಂಘದ ನೂತನ ಪಾಣೆ ಮಂಗಳೂರು ಗ್ರಾಮ ಘಟಕದ ಉದ್ಘಾಟನೆ ಹಾಗೂ ವಿಚಾರ ಸಂಕೀರಣದ ಉದ್ಘಾಟನೆ ಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಉದ್ಘಾಟಿಸಿ ರೈತರ ಮುಂದಿರುವ ಸವಾಲುಗಳು ಎದುರಿಸಲು ಸಂಘಟಿತ ಹೋರಾಟ ಅಗತ್ಯ ಅಲ್ಲದೇ ಎಲ್ಲಾ ಕ್ಷೇತ್ರದಲ್ಲಿರುವವರಿಗೆ ಅವರದ್ದೆ ಆದ ಸಂಘಟನೆಗಳಿವೆ ಆದರೇ ಸಮಾಜದ ದೊಡ್ಡ ಸಮೂಹವಾದ ರೈತ ಸಂಘಟನೆಗಳು ರಾಜಕೀಯವಾಗಿ ಹಾಗೂ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಒಂದಾಗದಿರುವುದು ವಿಪರ್ಯಾಸ ಎಂದರು
ದಿಕ್ಸೂಚಿ ಭಾಷಣದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ದೇಶದಲ್ಲಿ 80% ದಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು ದೇಶದ ಸಂಪತ್ತಿನಲ್ಲಿ ಗ್ರಾಮೀಣ ಪ್ರದೇಶದ ಕೊಡುಗೆ 75% ದಷ್ಟು ಇದ್ದರೂ ಕೃಷಿ ಕ್ಷೇತ್ರ ಅನುದ್ಪಾದಕ ಕ್ಷೇತ್ರವಾಗಿಸುವಲ್ಲಿನ ಪ್ರಭುತ್ವದ ರೈತ ವೀರೋಧಿ ನಿಲುವುಗಳ ಬಗ್ಗೆ ಆಕ್ರೋಶ ವ್ಯಕ್ತಪಡುಲಿಸುತ್ತಾ ಪ್ರಸ್ತುತ ಸರಕಾರಗಳು ಖಾಸಗೀಕರಣದ ಹೆಸರಲ್ಲಿ ವಿದ್ಯುತ್ ಕ್ಷೇತ್ರವನ್ನು ಮಾರಾಟ ಮಾಡುವ ಹುನ್ನಾರ,ಎಪಿಎಮ್ ಸಿ ಕಾಯ್ದೆ ತಿದ್ದುಪಡಿಯಿಂದಾಗಿ ಮುಂದಿನ ದಿನಳಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೇಲಿನ ದುಷ್ಪರಿಣಾಮ ಮತ್ತು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮೂಲಕ ರೈತರಿಂದ ಭೂಮಿಯನ್ನು ಕಸಿದು ಸಮಾಜವನ್ನು ಒಡೆಯುವ ಸರಕಾರಗಳ ಹುನ್ನಾರವನ್ನು ತಡೆಯಲು ಸಂಘಟಿತ ಹೋರಾಟವೇ ನಮ್ಮ ಮುಂದಿರುವ ದಾರಿ ಎಂದರು ಹಾಗೂ GST ಹೆಸರಿನಲ್ಲಿ ಜನಸಾಮಾನ್ಯರ ಜೇಬಿನಿಂದ ಹಗಲು ದರೋಡೆ ನಡೆಯುತ್ತಿದೆ ಎಂಬುದನ್ನು ವಿವರಿಸಿದರು
ಕಾರ್ಮಿಕ ಮುಖಂಡ ರಾಮಣ್ಣ ವಿಟ್ಟ ಮಾತನಾಡಿ ಹಿಂದೆಯು ಉಳುವವನೇ ಹೊಲದೊಡೆಯ ಕಾರ್ಯಕ್ರಮದ ಮೂಲಕ ರೈತರಿಗೆ ಭೂಮಿ ದೊರೆಯಬೇಕಾದರೆ ಕಾರ್ಮಿಕರು ಹಾಗೂ ರೈತರ ಸುದೀರ್ಘ ಜಂಟೀಹೋರಾಟದಿಂದ ಸಾಧ್ಯವಾಗಿದೆ ಮುಂದೆಯು ರೈತರು ಮತ್ತು ಕಾರ್ಮಿಕರು ಜೊತೆಯಾಗಿ ಹೋರಾಟ ನಡಸಿದಾಗ ಮಾತ್ರ ಪ್ರಭುತ್ವವನ್ನು ಮಣಿಸಲು ಸಾಧ್ಯ ಎಂದು ಕರೆ ನೀಡಿದರುಸಭಾಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಆಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ನರೇಂದ್ರ ಮೋದಿ ನೇತೃತ್ವದ ಸರಕಾರ ಜನವೀರೋಧಿ ಕೃಷಿಮಸೂದೆ ಗಳನ್ನು ಹಿಮ್ಮೆಟ್ಟಿಸಬೇಕಾದರೇ ಐತಿಹಾಸಿಕ ಸುಧೀರ್ಘ ಸಂಘಟಿತ ಹೋರಾಟದಿಂದ ಸಾಧ್ಯವಾಯಿತು. ನಾವೂ ಕೂಡ ಸಂಘಟಿತ ಹೋರಾಟ ಮಾಡುವ ಮೂಲಕ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು
ಯುವ ರೈತ ಘಟಕದ ಜಿಲ್ಲಾಧ್ಯಕ್ಷರಾದ ಆದಿತ್ಯ ನಾರಾಯಣ ಕೊಲ್ಲಾಜೆ ನೂತನ ಗ್ರಾಮ ಘಟಕಕ್ಜೆ ಶುಭ ಹಾರೈಸಿದರು
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್ ಕನ್ಯಾನ,ಜಿಲ್ಲಾ ಯುವ ರೈತ ಘಟಕದ ಗೌರವಾಧ್ಯಕ್ಷ ಸುರೇಂದ್ರ ಕೋರ್ಯ,ಸಂಘಟನಾ ಕಾರ್ಯದರ್ಶಿ ಚಂದ್ರ ಶೇಖರ್ ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ಲೊರೆಟ್ಟೊ ವಲಯ ಘಟಕದ ಅಧ್ಯಕ್ಷರಾದ ವಿನಯ್ ರೂಪಾಸ್ ಲಿಂಟೋ ಉಪಸ್ಥಿತರಿದ್ದರುಗ್ರಾಮ ಘಟಕ ಸಂಚಾಲನಾ ಸಮಿತಿಯ ಪ್ರಧಾನ ಸಂಚಾಲಕರಾದ ಸತೀಶ್ ಸಾಲ್ಯಾನ್ ಬೊಳಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆಮಾಡಿದರು ನೂತನ ಗ್ರಾಮ ಘಟಕದ ಅಧ್ಯಕ್ಷರಾಗಿ ಸತೀಶ್ ಸಾಲ್ಯಾನ್ ಬೊಳಂಗಡಿ ಆಯ್ಕೆಯಾದರು