ಬಜಪೆ:ಗಾಂಜಾ ಸೇವನೆ ಮಾಡುತಿದ್ದ ಇಬ್ಬರ ಬಂದನ

ಬಜಪೆ :ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಕಂಬ್ಲ,ಮತ್ತು ಪೊರ್ಕೋಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತಿದ್ದ ಇಬ್ಬರು ವ್ಯಕ್ತಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಅಂಬೇಡ್ಕರ್ ನಗರ ಪೊರ್ಕೋಡಿ ಕೆಂಜಾರು ಗ್ರಾಮದ ನಿವಾಸಿಗಳಾದ ಆತೀಕ್ ರೆಹಮಾನ್ (24 ) ಹಾಗೂ ಫಾಜೀಲ್( 25 ) ಎಂದು ಗುರುತಿಸಲಾಗಿದೆ.
ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಯಲ್ಲಿ ಗಾಂಜಾಸೇವನೆ ಮಾಡಿದ ಬಗ್ಗೆ ದೃಡಪಟ್ಟ ಮೇರೆಗೆ ಪ್ರಕರಣ ದಾಖಲಾಗಿದೆ.
ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ರವರು ಹಾಗೂ PSI, ಗುರು ಕಾಂತಿ ರವರ ನೇತೃತ್ವದಲ್ಲಿ, ಬಜಪೆ ಠಾಣೆಯ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.
