ಬಾಲವಿಕಾಸದಲ್ಲಿ ಶಾರದಾ ಪೂಜೆ
ವಿಟ್ಲ : ಅಕ್ಟೋಬರ್ 21 : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಶಾರದಾ ಪೂಜೆ ನೆರವೇರಿತು. ಮೊದಲಿಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ವೇದಮೂರ್ತಿ ಅನಂತ್ ಭಟ್ ಕಶೆಕೋಡಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದ ಪೂಜಾ ಕೈಂಕರ್ಯದಲ್ಲಿ ಶಾರದಾ ಪೂಜೆ ಹಾಗೂ ಶಾಲಾ ವಾಹನಗಳಿಗೆ ಪೂಜೆ ನಡೆಯಿತು. ಇದರ ಜೊತೆಗೆ ಶಾಲಾ ಗಣಕಯಂತ್ರಗಳು, ಶಾಲಾ ಅಡುಗೆ ಕೊಠಡಿ ಹಾಗೂ ಶಾಲಾ ಕಚೇರಿಯಲ್ಲಿರುವ ಸಲಕರಣೆಗಳಿಗೆ ಆಯುಧ ಪೂಜೆ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಜೆ, ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಅವರ ಧರ್ಮಪತ್ನಿ ನಮ್ರತಾ ರೈ , ಆಡಳಿತ ಮಂಡಳಿಯ ಸದಸ್ಯರಾದ ಸುಭಾಷಿಣಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ, ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆಯ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.