ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ಆಳ್ವಾಸ್ 6 ಕ್ರೀಡಾಪಟುಗಳು ಆಯ್ಕೆ
ಮೂಡಬಿದಿರೆ: ಅ.26ರಿಂದ ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ರಾಜ್ಯ ತಂಡದ 12 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆರು ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಆಳ್ವಾಸ್ ಮಲ್ಲಕಂಬ ತಂಡದ ಬಾಲಕರಾದ ಹನುಮಂತ್ ಎಂ., ಆಕಾಶ್ ಪಿ., ವಿನಾಯಕ್ ಕೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಭಾಗ್ಯಶ್ರೀ ಎಸ್, ದೊಡ್ಡಮ್ಮ ಪಿ, ಕಾವೇರಿ ಎಸ್ ಸೇರಿ ಆರು ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಇವರೆಲ್ಲರೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಶಿಕ್ಷಣ ಯೋಜನೆಯಡಿ ನಾಲ್ಕನೇ ತರಗತಿಯಿಂದ ಸ್ನಾತಕೋತ್ತರ ತರಗತಿಯವರೆಗೆ ಅಧ್ಯಯನ ನಡೆಸುತ್ತಿದ್ದು, ಮಲ್ಲಕಂಬ 110 ವಿದ್ಯಾರ್ಥಿಗಳ ತಂಡದ ಸದಸ್ಯರಾಗಿದ್ದಾರೆ. ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್‌ನ ಆಶ್ರಯದಲ್ಲಿ ಬಾಲಕೋಟೆ ಜಿಲ್ಲೆಯ ತುಳಸಿಗಿರಿ ಉದ್ದಂಡಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಆಯ್ಕೆಯಾದ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.