ಬಂಟ್ಚಾಳ : ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆಕಲ್ಲು
ಬಂಟ್ಚಾಳ: ಭಾರಿ ಮಳೆಗೆ ಅಮ್ಟಾಡಿ ಗ್ರಾಮದ ಮಹಲ್ ತೋಟ ರಸ್ತೆ ಬಳಿ ಬೃಹತ್ ಗಾತ್ರದ ಬಂಡೆ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ. ಲೊರಟ್ಟೊ ಪದವಿನಿಂದ ಮಹಲ್ ತೋಟ ಸಂಪರ್ಕಿಸುವ ರಸ್ತೆ ಇದಾಗಿದ್ದು ಬೆಳಿಗ್ಗೆ 8.30ರ ವೇಳೆಗೆ ಈ ಘಟನೆ ನಡೆದಿದೆ.
ಪ್ರತಿದಿನ ಈ ರಸ್ತೆಯ ಮೂಲಕ ಶಾಲಾ ವಿದ್ಯಾರ್ಥಿಗಳು ತೆರಳುತ್ತಿದ್ದು ಶಾಲೆಗೆ ರಜೆ ಇದ್ದುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅಮ್ಟಾಡಿ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಲ್ಲು ತೆರವು ಕಾರ್ಯ ಕೈ ಗೊಂಡಿದ್ದಾರೆ.