ಹೆಜಮಾಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಪರಿಸರವನ್ನು ಸಂರಕ್ಷಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದ್ದು, ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸವನ್ನು ಉಳಿಸಬೇಕಾಗಿದೆ ಎಂಬುದಾಗ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಹೇಳಿದ್ದಾರೆ.

ಅವರು ಪಡುಬಿದ್ರಿ ಪೊಲೀಸ್ ಠಾಣೆ ಹಾಗೂ ಪಡುಬಿದ್ರಿ ರೋಟರಿ ಕ್ಲಬ್ ಜಂಟಿಯಾಗಿ ಹೆಜಮಾಡಿ ಟೋಲ್ ಗೇಟ್ ಬಳಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿ, ಮರಗಿಡಗಳ ಮಹತ್ವ ಮಹಾಮಾರಿ ಕೋವಿಡ್ ಸಂದರ್ಭ ನಾವೆಲ್ಲಾ ಅರಿತುಕೊಂಡಿದ್ದೇವೆ. ಆಕ್ಸಿಜನ್ ಕೊರತೆಯಿಂದ ಅದೇಷ್ಟೋ ಮಂದಿ ನಮ್ಮವರನ್ನು ನಾವು ಕಳೆದುಕೊಂಡಿರುವ ಕಹಿ ನೆನಪು ಇಂದಿಗೂ ಜೀವಂತ.

ಆಕ್ಸಿಜನ್ ಉತ್ಪಾದಿಸಲು ಮತ್ತೊಂದು ದಾರಿ ಇಲ್ಲ ಕೇವಲ ಮರಗಿಡಗಳನ್ನು ಬೆಳೆಸಿ ಆ ಮೂಲಕ ಆಕ್ಸಿಜನ್ ಉತ್ಪಾದನೆ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲಾ ಸಂಘ-ಸಂಘಟನೆಗಳು ಇಂಥಹ ಸಮಜೋಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಆಸ್ತಿಯಾಗ ಬೇಕಾಗಿದೆ ಎಂದರು.

ಈ ಸಂದರ್ಭ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಪಡುಬಿದ್ರಿ ಮತ್ತು ಸಂಸ್ಥೆಯ ಸದಸ್ಯರು ಹಾಗೂ ಪಡುಬಿದ್ರಿ ಪೆÇಲೀಸ್ ಠಾಣಾ ಸಿಬ್ಬಂದಿಗಳು ಸಹಿತ ಟೋಲ್ ಗೇಟ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.