ಬಂಟ್ವಾಳ:ಆಲದಪದವಿನಲ್ಲಿ ವೈಭವಯುತವಾಗಿ ಸಂಪನ್ನಗೊಂಡ ಬೈದಶ್ರೀ ಸೌಹಾರ್ದ ಕ್ರೀಡಾಕೂಟ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಸ್ವಾಮಿ ಗುರು ಸಮಾಜ ಸೇವಾ ಸಂಘ, ವಾಮದಪದವು-ಆಲದಪದವು ಆಶ್ರಯದಲ್ಲಿ ಬೈದಶ್ರೀ ಸೌಹಾರ್ದ ಕ್ರೀಡಾಕೂಟವು ಆಲದಪದವು ಮೈದಾನದಲ್ಲಿ ವೈಭವಯುತವಾಗಿ ಸಂಪನ್ನಗೊಂಡಿತು.
ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು ಉತ್ಸಾಹದಿಂದ ಪಾಲ್ಗೊಂಡರು.
ಸಂಘದ ಗೌರವಾಧ್ಯಕ್ಷ ಮೋನಪ್ಪ‌ ಪೂಜಾರಿ ಪಾಲೆದಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.‌ದ.ಕ ಜಿಲ್ಲಾ ಮೂರ್ತೆದಾರರ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬಿರ್ವ ಕ್ರೀಡಾಂಗಣ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ ಅಧ್ಯಕ್ಷತೆ ವಹಿಸಿದ್ದರು.


ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಬಿಲ್ಲವ ಮಹಾಮಂಡಲದ ವಕ್ತಾರ ಬೇಬಿ ಕುಂದರ್, ಕಂಬಳ ಕೋಣದ ಯಜಮಾನರಾದ ಸತೀಶ್ಚಂದ್ರ ಸಾಲ್ಯಾನ್ ಇರುವೈಲು, ಗಣೇಶ್ ನಾರಾಯಣ ಪಂಡಿತ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಮೇಶ್ ಪೂಜಾರಿ ಕುಡ್ಮೇರು, ಪಂಜಿಕಲ್ಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ‌ ಪಿಲಿಂಗಾಲು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಕುತ್ತಿಲ ಬಿಲ್ಲವ ಸಂಘದ ಅಧ್ಯಕ್ಷ ಗಿರೀಶ್ ಪೂಜಾರಿ ಹೆಗ್ಗಡೆಬೆಟ್ಟುಗುತ್ತು, ಉದ್ಯಮಿಗಳಾದ ಹರಿಪ್ರಸಾದ್ ನೂಜಿದಡಿ, ಜನಾರ್ಧನ ಪೂಜಾರಿ ತಿಮರಡ್ಡ, ಶೇಖರ ಪೂಜಾರಿ ಅಗಲ್ದೋಡಿ, ಸೌಮ್ಯ ಮೋನಪ್ಪ ಪೂಜಾರಿ, ದೇವರಾಜ್ ಆಲದಪದವು, ರಾಯಿ ಗ್ರಾಮ‌ ಪಂಚಾಯತ್ ಅಧ್ಯಕ್ಷ ಸಂತೋಷ್ ಪೂಜಾರಿ ಬೆಟ್ಟು, ಉದ್ಯಮಿಗಳಾದ ವಿಶ್ವನಾಥ ಪೂಜಾರಿ ಪಂಜಿರೇಲು, ಶೇಖರ ಪೂಜಾರಿ ಪರಾತ್ಯಾರು, ಭಾಸ್ಕರ ಪೂಜಾರಿ ನಾಯರ್ಕುಮೇರು, ಶಿವಣ್ಣ ಪೂಜಾರಿ ನಾಯರ್ಕುಮೇರು, ಸದಾನಂದ ಪೂಜಾರಿ ಅಂಗಡಿಪಲ್ಕೆ, ಜಯಂತ್ ಕೋಟ್ಯಾನ್, ಯತೀಶ್ ಪೂಜಾರಿ ಇರ್ವತ್ತೂರು, ದಿನೇಶ್ ಇರ್ವತ್ತೂರು, ಹರೀಶ್ ಇರ್ವತ್ತೂರುಪದವು, ರಾಜೇಶ್ ಪೂಜಾರಿ ಸೇವಾ, ರೂಪೇಶ್ ಪೂಜಾರಿ ವಾಮದಪದವು, ರೂಪೇಶ್ ಪೂಜಾರಿ ಪಾಲೆದಮರ, ಶ್ರೀನಿವಾಸ್ ಪೂಜಾರಿ ಅತ್ತಾಜೆ, ಅಣ್ಣಿ ಪೂಜಾರಿ ಬೆಟ್ಟುಗದ್ದೆ, ಕ್ರೀಡಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ನಾಯರ್ಕುಮೇರು, ಕಾರ್ಯದರ್ಶಿ ಕೀರ್ತನ್ ಕುಮಾರ್ ಕುದ್ಕಂದೋಡಿ, ಸುದೀಪ್ ಪೂಜಾರಿ ಬೆಟ್ಟುಗದ್ದೆ, ಪ್ರಕಾಶ್ ಪೂಜಾರಿ ಪಾಲೆದಡಿ ಉಪಸ್ಥಿತರಿದ್ದರು. ದೇಯಿ ಬೈದೆತಿ‌ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ರಾಜೇಂದ್ರ ಕೊರಂಟಬೆಟ್ಟು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಚಂದಪ್ಪ‌ ಪೂಜಾರಿ ಆಗಮೆ ವಂದಿಸಿದರು. ಗೋಪಾಲ ಅಂಚನ್ ಆಲದಪದವು, ಸತೀಶ್ ಕರ್ಕೆರಾ ಕಯ್ಯಾಬೆ, ಸೌಮ್ಯ ಮಾಧವ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.