ಮಂಗಳೂರು : ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ
ಮಂಗಳೂರಿನ ಶ್ರೀ ಗುಜರಾತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿಬಿಎಸ್‌ಸಿ ರಸ್ತೆ ಸುರಕ್ಷತೆ ಜಾಗೃತಿ ತಿಂಗಳ ನಿಮಿತ್ತ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಶಿಕ್ಷಕರಾದ ನಾಗರಾಜ್ ಮತ್ತು ಜಯಶ್ರೀ ಅವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದರು. ಕುದ್ರೋಳಿ ಬಳಿ ರಸ್ತೆಬದಿಯಲ್ಲಿ ನಿಂತು ಹೆಲ್ಮೆಟ್ನ ಮಹತ್ವ ಸಾರುವ ಘೋಷಣಾ ಫಲಕಗಳನ್ನು ಹಿಡಿದರು. ಅವರು ಸವಾರರನ್ನು ತಡೆದು, ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು ಮತ್ತು ಅವರಿಗೆ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಇದು ಸುತ್ತಮುತ್ತಲಿನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಈ ವಿದ್ಯಾರ್ಥಿಗಳು ಬೆಳಿಗ್ಗೆ ಕೇವಲ 40 ನಿಮಿಷಗಳ ಅವಧಿಯಲ್ಲಿ ಹೆಲ್ಮೆಟ್ ಧರಿಸದ ಸುಮಾರು 60 ಸವಾರರನ್ನು ಕಂಡರು. ಇದು ತಮ್ಮ ಜೀವವನ್ನೇ ಪಣಕ್ಕಿಟ್ಟ ಸವಾರರ ನಿರ್ಲಕ್ಷ್ಯವನ್ನು ತೋರಿಸುತ್ತದೆ.