ಬಂಟ್ವಾಳ: ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯದಲ್ಲಿ ಫೆ.10 ಮತ್ತು 11 ರಂದು ವಾರ್ಷಿಕ ಕೋಲೋತ್ಸವ
ಬಂಟ್ವಾಳದ ಅಮ್ಟೂರು ಗ್ರಾಮದ ಕರಿಂಗಾಣದಲ್ಲಿರುವ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಶ್ರೀ ಮಂತ್ರದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವವು ಫೆ.10 ಮತ್ತು 11 ರಂದು ನಡೆಯಲಿದೆ.
ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯ.. ಬೇಡಿ ಬಂದ ಭಕ್ತರ ಇಷ್ಟರ್ಥಗಳನ್ನು ಈಡೇರಿಸೋ ಪುಣ್ಯ ಕ್ಷೇತ್ರ.. ಕ್ಷೇತ್ರದಲ್ಲಿ ಇದೇ ಬರುವ ಫೆ.೧೦ರಂದು ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವಹಾಗೂ ೧೧ರಂದು ಸ್ವಾಮಿ ಕೊರಗಜ್ಜ ಮತ್ತು ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವ ವಿಜ್ರಂಭಣೆಯಿಂದ ನಡೆಯಲಿದೆ.