ಬೈಂದೂರು: ಲಕ್ಷಾಂತರ ರೂಪಾಯಿ ಸೀಸಾ ಕಳ್ಳತನ, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವನ ಬಂಧನ
ಬೈಂದೂರು ತಾಲೂಕಿನ ಗಂಗೊಳ್ಳಿ, ಮ್ಯಾಂಗನೀಸ್ ರೋಡ್ ಬಳಿ ಲಕ್ಷಾಂತರ ರೂಪಾಯಿ ಸೀಸ ಕಳ್ಳತನ ಮಾಡಿದ ಘಟನೆ ನಡೆದಿದೆ. ಅಕ್ಷಯ ಖಾರ್ವಿ ಎಂಬವರಿಗೆ ಸೇರಿದ ಅಂಗಡಿಯಾಗಿದ್ದು, ಕಳ್ಳಲು ನುಗ್ಗಿ ಲಕ್ಷಾಂತ ರೂಪಾಯಿ ಮೌಲ್ಯದ ಸೀಸ ಎಗರಿಸಿ ಪರಾರಿಯಾಗಿದ್ದರು. ಕಳ್ಳರ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸ್ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಅಶ್ಫಕ್ ನನ್ನು ಗಂಗೊಳ್ಳಿ ಪೋಲಿಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.