ಬಂಟ್ವಾಳ: ಫೆ.11ರಂದು ಇರಾ ಬಂಟರ ಭವನದಲ್ಲಿ ‘ಸಂಧ್ಯಾ’ ಲಯನ್ಸ್ ಪ್ರಾಂತೀಯ ಸಮ್ಮಿಲನ

ಬಂಟ್ವಾಳ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317 ಡಿ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ ‘ಸಂಧ್ಯಾ’ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರ ನೇತೃತ್ವದಲ್ಲಿ, ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಇವರ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕೊಳ್ಳಾಡು ಸಾಲೆತ್ತೂರು ಇದರ ಆತಿಥ್ಯದಲ್ಲಿ ಫೆಬ್ರವರಿ 11ರಂದು ಇರಾ ಬಂಟರ ಭವನದ ಬಿ. ವಿ. ಕಾರಂತ ವೇದಿಕೆಯಲ್ಲಿ ನಡೆಯಲಿದೆ.
ಪ್ರಾಂತ್ಯ 5ರ ಕ್ಲಬ್‌ಗಳಾದ ಕೊಳ್ಳಾಡು ಸಾಲೆತ್ತೂರು, ಬಂಟ್ವಾಳ, ಮಂಗಳಗಂಗೋತ್ರಿ, ಚೋಟಮಂಗಳೂರು, ಲೊರೆಟ್ಟೋ ಅಗ್ರಾರ್, ಮುಡಿಪು ಕುರ್ನಾಡು, ವಾಮದಪದವು ಪ್ರಕೃತಿ, ವಿಟ್ಲ ಸಿಟಿ, ರಾಯಿ ಸಿದ್ಧಕಟ್ಟೆ ಹಾಗೂ ಅಮ್ಟೂರು ಒಳಗೊಂಡಂತೆ ಈ 10 ಕ್ಲಬ್‌ಗಳ ಪ್ರಾಂತೀಯ ಸಮ್ಮಿಲನವು ಸೇವಾ ಸಾರ್ಥಕ್ಯದ ಹೊಂಗಿರಣ ಶೀರ್ಷಿಕೆಯೊಂದಿಗೆ ವಿಶೇಷವಾಗಿ ಮಂಚಿ, ಇರಾ, ಕೊಳ್ಳಾಡು ಗ್ರಾಮದ ಸರಕಾರಿ ಶಾಲೆಗಳ ವಿಶೇಷ ಅಗತ್ಯಕ್ಕೆ ನೆರವಿನ ಸೇವಾ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಪ್ರಾಂತ್ಯ 5ರ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಪ್ರಾಂತೀಯ ಸಮ್ಮಿಲನ ಸಮಿತಿಯ ಅಧ್ಯಕ್ಷ ದಾಮೋದರ ಬಿ.ಎಂ. ಮಾತನಾಡಿ ಈ ಸಮಾರಂಭದಲ್ಲಿ ಐವರು ಸಾಧಕರಾದ ಸೇವೆಯ ಮೂಲಕ ಗುರುತಿಸಿಕೊಂಡಿರುವ ಸೂರ್ಯನಾರಾಯಣ ರಾವ್ ಪತ್ತುಮುಡಿಯವರಿಗೆ ಲಯನ್ಸ್ ಉದ್ಯಮ ಭೂಷಣ ಪ್ರಶಸ್ತಿ, ಸುಲೈಮಾನ್ ಹಾಜಿಯವರಿಗೆ ಲಯನ್ಸ್ ಉದ್ಯಮ ಸೌರಭ ಪ್ರಶಸ್ತಿ, ಸತೀಶ್ ಕುಮಾರ್ ಆಳ್ವರವರಿಗೆ ಲಯನ್ಸ್ ಉದ್ಯಮ ತಿಲಕ ಪ್ರಶಸ್ತಿ, ಸುಧಾಕರ ಆಚಾರ್ಯರಿಗೆ ಲಯನ್ಸ್ ಉದ್ಯಮ ರತ್ನ ಪ್ರಶಸ್ತಿ, ಉಮಾನಾಥ ರೈ ಮೇರಾವು ಇವರಿಗೆ ಲಯನ್ಸ್ ಶಿಕ್ಷಣ ಭೂಷಣ ಪ್ರಶಸ್ತಿ ಎಂಬ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ ಹಾಗೂ ಎಕ್ಟ್ರೀಮ್ ಡ್ಯಾನ್ಸ್ ಕ್ರೂ ಬಿ.ಸಿ.ರೋಡು ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಲಿದೆ ಎಂದ ಅವರು ಕಾರ್ಯಕ್ರಮದಲ್ಲಿ ಬಹುತೇಕ ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಗಮಹರಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಂಧ್ಯಾ ಪ್ರಾಂತೀಯ ಸಮ್ಮಿಲನದ ಕಾರ್ಯದರ್ಶಿ ಜಯಪ್ರಕಾಶ್ ರೈ, ಕೋಶಾಧಿಕಾರಿ ರಾಮ್‌ಪ್ರಸಾದ್ ರೈ, ಮಾಧ್ಯಮ ಸಮಿತಿಯ ಸಂಚಾಲಕ ಕೆ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.