ಬೆಳಪು: ಕೋಳಿ ಅಂಕಕ್ಕೆ ದಾಳಿ, ನಾಲ್ವರು ವಶಕ್ಕೆ
ಬೆಳಪು ಗ್ರಾಮದ ಮಲೆ ಜುಮಾದಿ ದೈವಸ್ಥಾನದ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿದ ಶಿರ್ವ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಬ್ರಹ್ಮಾವರ ಬೈಕಾಡಿ ಪಡು ತೆಂಕುಮನೆ ನಿವಾಸಿ ಅರುಣ್ ಶೆಟ್ಟಿ, ಪಾಂಗಾಳ ಗುಡ್ಡೆ ಅಕ್ಕು ತೋಟ ನಿವಾಸಿ ಸುರೇಶ್ ಪೂಜಾರಿ , ಮೂಳೂರು ದಡ್ಡಿನಗುಜ್ಜಿ ಗೋಪಾಲ ನಿಲಯ ನಿವಾಸಿ ನಿಕ್ಷಿತ್, ಉಚ್ಚಿಲ ಬಡ ಗ್ರಾಮ ಭಾಸ್ಕರ್ ನಗರ ನಿವಾಸಿ ರವಿ ಪೂಜಾರಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ೬೯೦೦ ರೂಪಾಯಿ ಹಾಗೂ ಅಕ್ರಮ ಕೂಟಕ್ಕೆ ಬಳಸಲಾದ ಕೋಳಿಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.