ಬೆಳ್ತಂಗಡಿ: ಶ್ರೀ ವನ ದುರ್ಗಾ ಕೃಪಾಶ್ರಿತ ಸಂಚಾರಿ ನಡುಮನೆ ಯಕ್ಷಗಾನ ಕಲಾವಿದರಿಂದ ಮನೆ ಮನೆ ಯಕ್ಷಗಾನ
ಬೆಳ್ತಂಗಡಿ ತಾಲೂಕಿನ ಶಿಶಿಲ ಶ್ರೀ ವನ ದುರ್ಗಾ ಕೃಪಾಶ್ರಿತ ಸಂಚಾರಿ ನಡುಮನೆ ಯಕ್ಷಗಾನ ಕಲಾವಿದರಿಂದ ಮನೆ ಮನೆ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಮೇಳದ ಭಾಗವತರಾದ ಮೋಹನ್ ಶಿಶಿಲ ಮಾತನಾಡಿ, ಯಕ್ಷಗಾನ ಕಲೆ ಹಲವಾರು ವರ್ಗಗಳಿಂದ ಇದೆ ಆದರೆ ಜನರು ಈಗೀಗ ಟಿವಿ ಮೊಬೈಲ್ ಗಳಲ್ಲಿ ಬೇರೆ ಬೇರೆ ಕಾರ್ಯಕ್ರಮ ನೋಡುತ್ತಾರೆ ಆದ್ದರಿಂದ ಹಳ್ಳಿ ಜನರಿಗೆ ಯಕ್ಷಗಾನದ ಅರಿವು ಮೂಡಿಸುವ ಕಾರ್ಯಕ್ರಮ ನಾವು ಮಾಡುತ್ತಿದ್ದೇವೆ,ಇದರಿಂದ ಬಂದ ಉಳಿಕೆ ಹಣವನ್ನು ಅಂಗವಿಕಲರಿಗೆ ಹಾಗೂ ದೇವಸ್ಥಾನಕ್ಕೆ ದಾನದ ರೂಪವಾಗಿ ವರ್ಷಂಪ್ರತಿ ಕೊಡುತ್ತಿದ್ದೇವೆ ಎಂದು ಹೇಳಿದರು.
ನಂತರ ವೇಷದಾರಿ ಒಬ್ಬರು ಮಾತನಾಡುತ್ತ ಈ ಕಾರ್ಯಕ್ರಮ ನಮಗೆ ಬಹಳ ಖುಷಿ ಆಗುತ್ತದೆbನಾವು ಸುಮಾರು ನಾಲ್ಕೈದು ಗ್ರಾಮಗಳಲ್ಲಿ ರಾಮಾಯಣ ಮಹಾಭಾರತದ ಕಥೆಯನ್ನು ಯಕ್ಷಗಾನದ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.