ಬೆಳ್ತಂಗಡಿ: ಶಿಬಾಜೆಯಲ್ಲಿ ಅಂಗಡಿ ಧ್ವಂಸ: ಸ್ಥಳೀಯ ಮುಖಂಡರಿಂದ ಕೃತ್ಯ ಖಂಡನೆ
ಸುಮಾರು 25 ವರ್ಷಗಳಿಂದ ವರ್ಷಗಳಿಂದ ನಡೆಸುತ್ತಿದ್ದ ಅಂಗಡಿಯನ್ನು ರಾತ್ರೋ ರಾತ್ರಿ ದ್ವಂಸ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸು ಪೂಜಾರಿ ಎಂಬವರಿಗೆ ಸೇರಿದ ಅಂಗಡಿಯನ್ನು ದ್ವಂಸ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಖಂಡ ನವೀನ್ ನೆರಿಯ ಮಾತನಾಡಿ ಶಿಬಾಜೆ ಗ್ರಾಮದಲ್ಲಿ ಹಲವಾರು ಬೇಡದ ಚಟುವಟಿಕೆ ನಡೆಯುತ್ತಿವೆ. ಇದಕ್ಕೆ ದ್ವಂಸಕಾರಿ ತಂಡವೇ ಕಾರಣ. ಇಲ್ಲಿನ ದಲಿತರಿಗೆ ಹಾಗೂ ಇತರರಿಗೆ ಬದುಕಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಅನಂತರ ವಾಸು ಪೂಜಾರಿ ಯವರು ಮಾತನಾಡಿ ಹಿಂದೆ ಹಲವಾರು ರೀತಿಯಲ್ಲಿ ಹಿಂಸೆ ನೀಡುತ್ತಿದ್ದರು, ನಿನ್ನೆ ರಾತ್ರಿ ನನ್ನ ಅಂಗಡಿಯನ್ನು ನೆಲಸಮ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಬೇಕು ಎಂದು ಅಳಲು ತೋಡಿಕೊಂಡರು. ಸಾರ್ವಜನಿಕರು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ,
ಸ್ಥಳಕ್ಕೆ ಧರ್ಮಸ್ಥಳ ಉಪ ನಿರೀಕ್ಷಕ ಅನಿಲ್ ಹಾಗೂ ಬೆಳ್ತಂಗಡಿ ಪೊಲೀಸ್ ನಿರೀಕ್ಷಕ ನಾಗೇಶ್ ಕದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.