ತಮಿಳುನಾಡು ಮಂತ್ರಿ ಪೊನ್ಮುಡಿಯವರಿಗೆ ಶಿಕ್ಷೆ
ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿಯವರಿಗೆ ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿದ ಭ್ರಷ್ಟಾಚಾರ ಆರೋಪದ ಕಾರಣಕ್ಕೆ ಮದರಾಸು ಹೈಕೋರ್ಟು ಮೂರು ವರುಷಗಳ ಸಾದಾ ಶಿಕ್ಷೆಯನ್ನು ಗುರುವಾರ ಬೆಳಿಗ್ಗೆ ವಿಧಿಸದೆ.
ಮೊನ್ನೆ ಅಪರಾಧ ಸಾಬೀತು ಎಂದು ಸಾರಿದ ಉಚ್ಚ ನ್ಯಾಯಾಲಯವು ಇಂದು ಶಿಕ್ಷೆ ಎಷ್ಟೆಂದು ಸಾರಿತು. ಪೊನ್ಮುಡಿ ಮತ್ತು ಅವರ ಹೆಂಡತಿಯ ಹೆಸರಿನಲ್ಲಿ ರೂ. 1.75 ಕೋಟಿ ರೂಪಾಯಿಯ ಸಂಪತ್ತು ಇದ್ದು, ಅದು ಅವರ ಆದಾಯಕ್ಕಿಂತ 65.99% ಹೆಚ್ಚು ಎಂದು ಕೋರ್ಟು ತೀರ್ಪು ನೀಡಿತು.
ಅಲ್ಲದೆ ಪೊನ್ಮುಡಿ ಮತ್ತು ಅವರ ಮಡದಿಗೆ ತಲಾ 50 ಲಕ್ಷ ರೂಪಾಯಿ ದಂಡವನ್ನು ಕೂಡ ಕೋರ್ಟು ವಿಧಿಸಿದೆ. 2016ರಲ್ಲಿ ವಿಲ್ಲುಪುರಂ ಟ್ರಯಲ್ ಕೋರ್ಟು ಪೊನ್ಮುಡಿಯವರನ್ನು ಬಿಡುಗಡೆ ಮಾಡಿತ್ತು. ಉಚ್ಚ ನ್ಯಾಯಾಲಯವು ಆ ತೀರ್ಪನ್ನು ರದ್ದು ಮಾಡಿ 72ರ ಪೊನ್ಮುಡಿಯವರಿಗೆ ಶಿಕ್ಷೆ ಮತ್ತು ದಂಡ ವಿಧಿಸಿದೆ. ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವುದು ಸಾಬೀತಾಗಿದೆ ಎಂದು ಜಸ್ಟಿಸ್ ಜಯಚಂದ್ರನ್ ಹೇಳಿದರು.