ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ದಂಡ
ಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಳುನಾಡಿನ ಕಂಬಳ ಆಯೋಜಿಸಿದ್ದ ಸಂಘಟಕರಿಗೆ ಬಿಬಿಎಂಪಿ- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ರೂ. 50,000 ದಂಡ ವಿಧಿಸಿದ್ದಾರೆ.
ಅರಮನೆಯ ಕಾಂಪೌಂಡಿನ ಹೊರಗೆ ಹೇಗೆಂದರೆ ಹಾಗೆ ಬ್ಯಾನರ್ ಮತ್ತು ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಇವೆಲ್ಲ ಇದ್ದುದರಿಂದ ಅವಕ್ಕೆ ಬಿಬಿಎಂಪಿ ದಂಡ ವಿಧಿಸಿದೆ. ಅಲ್ಲದೆ ಅವುಗಳನ್ನೆಲ್ಲ ತೆರವು ಮಾಡಿದೆ.
ಉಳಿದಂತೆ 200 ಜೋಡಿಯಷ್ಟು ಕೋಣಗಳು ಭಾಗವಹಿಸಿದ ಬೆಂಗಳೂರು ಕಂಬಳ ಅದ್ಭುತವಾಗಿ ನಡೆಯಿತು. ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಿಲ್ಲ ಎಂದು ಕೆಲವು ಸಂಘಟನೆಗಳವರು ತಕರಾರು ತೆಗೆದದ್ದೂ ನಡೆಯಿತು. ನಿಮ್ಮ ಕಂಬಳ ಮಾಧ್ಯಮ ಮತ್ತು ವಿಐಪಿಗಳಿಗಾ ಎಂದೂ ಕೆಲವರು ಪ್ರಶ್ನೆ ಎತ್ತಿದ್ದಾರೆ.