ಭಗವಾನ್ ಮಹಾವೀರರ ಜಯಂತಿ : ಅಹಿಂಸಾ ಜಾಥ
ಬೆಂಗಳೂರು; ಭಗವಾನ್ ಮಹಾವೀರರ 2622ನೇ ಜನ್ಮ ಕಲ್ಯಾಣ ಮಹೋತ್ಸವದ ಅಂಗವಾಗಿ ಜೈನ್ ಯುವ ಸಂಘಟನೆಯಿಂದ ಅಹಿಂಸೆ ಮತ್ತು ವಿಶ್ವಶಾಂತಿ ಉದ್ದೇಶದಿಂದ ನಗರದ ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ಅಹಿಂಸಾ ಜಾಥ ನಡೆಯಿತು.
ಜೈನ ಸಮುದಾಯದವರು ಮಹಾವೀರರ ಶಾಂತಿ ಸಂದೇಶ ಸಾರುವ ಸ್ತಬ್ದ ಚಿತ್ರಗಳೊಂದಿಗೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.
ಫ್ರೀಡಂ ಪಾರ್ಕ್ ನಲ್ಲಿ ಜೈನ್ ಯುವ ಸಂಘಟನೆಯಿಂದ ಭಗವಾನ್ ಮಹಾವೀರರಿಗೆ ಮಹಾಭಿಷೇಕ ನೆರವೇರಿಸಲಾಯಿತು. ಅವರ ಸಂದೇಶಗಳನ್ನು ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೊತೆಗೆ ಸಾಮಾಜಿಕ ಮತ್ತು ಮಾನವೀಯ ಚಟುವಟಿಕೆಗಳಾದ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ, ಅನ್ನದಾನ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್ , ಲಹರ್ ಸಿಂಗ್ ಸಿರೋಹಿಯ, ಗೌತಮ್‍ಕುಮಾರ್ ಮಕಾನ ಗೌತಮ್ ಸೊಲಂಕಿ, ಪುಖರಾಜ್ ಮೆಹತಾ ಕಮಲ್ ದುಗ್ಗಡ್, ಪ್ರಸ್ಸನ್ನಯ್ಯ, ಜೈನ್ ಯುವ ಸಂಘಟನೆಯ ಅಧ್ಯಕ್ಷ ದಿನೇಶ್ ಖಿವೆಂಸರ ಕಾರ್ಯದರ್ಶಿ ಮಹೇಂದ್ರ ಬಾಗರೇಚಾ ಭಾಗವಹಿಸಿದ್ದರು