ಮುಖ್ಯಮಂತ್ರಿ ಆಶೀರ್ವಾದ ಪಡೆದ ಭಾಗೀರಥಿ ಮುರುಳ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿ ಅವರಿಗೆ ಹೂ ನೀಡಿ, ಆಶೀರ್ವಾದ ಪಡೆದರು.
ಶುಭವಾಗಲಿ ಎಂದು ಸಿಎಂ ಆಶೀರ್ವದಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಭಾಗೀರಥಿ ಮುರುಳ್ಯ ಅವರು, ಸಾಮಾನ್ಯ ಕಾರ್ಯಕರ್ತೆ ಆಗಿರುವ ನನಗೆ ಚುನಾವಣೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಪಕ್ಷದ ಹಿರಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡಿ, ಚುನಾವಣೆ ಎದುರಿಸಲಾಗುವುದು. ಬಿಜೆಪಿ ಸರಕಾರದ ಸಚಿವರ, ಶಾಸಕರ, ಮೋದಿ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಕೇಳುತ್ತೇನೆ ಎಂದರು.ಎಸ್.ಅಂಗಾರ ರಾಜಕೀಯದಿಂದ ನಿವೃತ್ತಿ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಅವರ ಜತೆ ಮಾತನಾಡುತ್ತೇನೆ. ಅವರ ಸಹಕಾರ ಬೇಕು. ಅಸಮಾಧಾನ ವನ್ನು ಪಕ್ಷದ ಹಿರಿಯರು ಬಗೆಹರಿಸಲಿದ್ದಾರೆ ಎಂದ ಅವರು ಪಕ್ಷದ ನಾಯಕರ, ಹಿರಿಯರ, ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದರು.