ಬ್ರಹ್ಮಾವರ ರುಡ್ ಸೆಟ್‍ನಿಂದ ಸ್ವ ಉದ್ಯೋಗ ತರಬೇತಿ

ಬ್ರಹ್ಮಾವರದಲ್ಲಿ ರುಡ್ ಸೆಟ್ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರೀಗೆ ಸ್ವ ಉದ್ಯೋಗ ಮತ್ತು ಕಿರು ಉದ್ಯಮಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನಾನಾ ಸರಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಸಹಕಾರದಲ್ಲಿ ಉಜಿರೆಯಲ್ಲಿ 1982ರಲ್ಲಿ ರುಡ್ ಸೆಟ್ ಗಳ ಪರಿಕಲ್ಪನೆಯಲ್ಲಿ ಮಾಡಲಾಗಿ ಬ್ರಹ್ಮಾವರದಲ್ಲಿ 1988 ಆರಂಭಗೊಂಡು ಸಹಸ್ರಾರು ಜನರೀಗೆ ಸ್ವಉದ್ಯೋಗದ ತರಬೇತಿ ನೀಡುತ್ತಿದೆ .

ನುರಿತ ತರಬೇತುದಾರರಿಂದ ಕನಿಷ್ಟ 6 ದಿನದಿಂದ 45 ದಿನದ ನಾನಾ ತರಬೇತಿಯಲ್ಲಿ ಈ ತನಕ 901 ಬ್ಯಾಚ್‍ನಲ್ಲಿ 26399 ಜನ ತರಬೇತಿ ಪಡೆದು, 19361 ಜನ ಸ್ವ ಉದ್ಯೋಗ ಮಾಡುತ್ತಿದ್ದು 7318 ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಅಂಗವಿಕಲರಿಗೆ, ಲೈಂಗಿಕ ಕಾರ್ಯಕರ್ತರಿಗೆ ಮುಂಗಳಮುಖಿಯರಿಗೆ ತರಬೇತಿಗಳನ್ನು ಅಭಿವೃದ್ಧಿಪಡಿಸಿ ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಸಲಾಗಿದೆ.

18 ವರ್ಷದಿಂದ 45ರ ವಯೋಮಿತಿಯವರು ಸಂಸ್ಥೆಯಲ್ಲಿ ದೊರಕುವ ಉಚಿತ ತರಬೇತಿಗಳ ಬಗ್ಗೆ 0820-2563455, 9449862808 ಸಂಖ್ಯೆಗೆ ಕರೆ ಮಾಡಿ ಉದ್ಯೋಗದ ತರಬೇತಿ ಪಡೆಯ ಬಹುದಾಗಿದೆ.

Related Posts

Leave a Reply

Your email address will not be published.