ಅದ್ಯಪಾಡಿ : ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್‍ನ ಭಕ್ತಿ ಗೀತೆಗಳ ಲೋಕಾರ್ಪಣೆ
ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಅದ್ಯಪಾಡಿಯ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್ ಎಂಬ 5 ಭಕ್ತಿ ಗೀತೆಗಳ ಲೋಕಾರ್ಪಣೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಗೆಗೆ ತುಳು ಭಕ್ತಿ ಗೀತೆಯು ಬಿಡುಗಡೆಗೊಂಡಿತು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಕೆ ಲಕ್ಷ್ಮೀ ನಾರಾಯಣ ಅಸ್ರಣ್ಣರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅಶೀರ್ವಚನ ನೀಡಿದರು.
ಗಾಯಕರಾದ ವಿನಯ್ ಕುಮಾರ್ ಅದ್ಯಪಾಡಿ, ಲೋಕೇಶ್ ಕುಲಾಲ್ ಸುಂಕದಕಟ್ಟೆ, ಶಿವಾನಂದ ಬಡಗಬೆಳ್ಳೂರು, ಶ್ರೀಮತಿ ಅಶ್ವಿನಿ ವಿನಯ್ ಕುಮಾರ್, ಸಂಕಲನಕಾರ ಪ್ರಸಾದ್ ಕೊಳಂಬೆ, ನಿರ್ಮಾಪಕರಾದ ಪ್ರಶಾಂತ್ ಪೂಜಾರಿ ಇವರನ್ನು ಶ್ರೀ ಲಕ್ಷ್ಮೀನಾರಾಯಣ ಆಶ್ರನರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಶ್ವಿನ್ ಬಳ್ಳಾಲರು ಬೈಲು ಬೀಡು, ಸುಧಾಕರ ರಾವ್ ಪೇಜಾವರ ಕದ್ರಿ, ಬಂಟ್ವಾಳ ಗಾಣಿಗ ಸಂಘದ ಅಧ್ಯಕ್ಷರಾದ ರಾಘು ಸಪಲ್ಯ ಮಂಗಳೂರಿನ ಬಜರಂಗದಳ ವಿಭಾಗ ಸಂಚಾಲಕರಾದ ಭುಜಂಗ ಕುಲಾಲ್, ಬಾಲಕೃಷ್ಣ ಕಾವ, ಯಶೋಧರ ಕಾವ ಪಾದೆ ಅದ್ಯಪಾಡಿ, ನಿಟ್ಟೆ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ರವೀಂದ್ರ ಕೌಡೂರು, ಪುರುಷೋತಮ ಪೂಜಾರಿ ಪೂಜಾರಿ ಮನೆ ಕೌಡೂರು, ಪ್ರಶಾಂತ್ ಪೂಜಾರಿ ನಂದಗೋಕುಲ, ಗಾಂದೊಟ್ಯ ಸರಪಾಡಿ, ಪ್ರವೀಣ್ ಶೆಟ್ಟಿ ಮರಕಡ, ಯೋಗೀಶ್ ಶೆಟ್ಟಿ ಥೆಂಜಾ, ಪ್ರಭಾಕರ ಆಚಾರ್ಯ ಕಂದಾವರ, ಬೀಬಿಲಚ್ಚಿಲ್ ಕ್ಷೇತ್ರದ ಪ್ರಧಾನ ಅರ್ಚಕರಾದ ಗೋಪಾಲ ಕೃಷ್ಣ ಭಟ್, ಆದಿತ್ಯ ಭಟ್ ಬೀಬಿಲಚ್ಚಿಲ್, ಬೀಬಿಲಚ್ಚಿಲ್ ದೇವಸ್ಥಾನ ಆಡಳಿತ ಮೊಕ್ತೇಸರರು ಮೋನಪ್ಪ ಮೇಸ್ತ್ರಿ ಬೀಬಿಲಚ್ಚಿಲ್ ಉಪಸ್ಥಿತರಿದ್ದರು.
ತಿಲಕ್ ಶೆಟ್ಟಿ ಬೆಲಾಡಿ ಕಾರ್ಯಕ್ರಮ ನಿರೂಪಿಸಿದರು. ದೇವಿಶ್ ಬೀಬಿಲಚ್ಚಿಲ್ ಧನ್ಯವಾದ ಸಮರ್ಪಿಸಿದರು.