ಬಿಗ್‍ಬಾಸ್ ಸೀಸನ್ 9 ಇಂದಿನಿಂದ ಟಿವಿ ಸೀಸನ್ ಆರಂಭ

ಒಟಿಟಿ ಸೀಸನ್ ಮುಗಿದ ಬೆನ್ನಲ್ಲೆ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್‍ನ ಟಿವಿ ಸೀಸನ್ ಇಂದು ಆರಂಭಗೊಳ್ಳುತ್ತಿದ್ದು, ಬಿಗ್‍ಬಾಸ್ ಸೀಸನ್ 9ರ ಮನೆಗೆ ಸದಸ್ಯರನ್ನು ಕಳುಹಿಸಲು ಕಲರ್ಸ್ ಕನ್ನಡ ಚಾನೆಲ್ ಸಜ್ಜಾಗಿದೆ. ಒಟಿಟಿಯಲ್ಲಿ ಸೀಸನ್‍ನಲ್ಲಿ ಟಾಪರ್ ಅಗಿರುವ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್‍ಗೆ ಎಂಟ್ರಿ ಕೊಡಲಿದ್ದಾರೆ.

ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ, ಇವರು ಕನ್ನಡದಲ್ಲಿ ನಿಶಬ್ಧ-2 , ಪಿಶಾಚಿ 2 ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರಿಗಿಟ್ ಸಿನಿಮಾದಿಂದ ಪ್ರಸಿದ್ದಿ ಪಡೆದಿರುವ ರೂಪೇಶ್ ಶೆಟ್ಟಿ ಅವರು ಕನ್ನಡ ಬಿಗ್‍ಬಾಸ್ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿ ಕರ್ನಾಟಕದ ಜನತೆಯ ಮನಗೆದ್ದು, ಟಾಪರ್ ಆಗಿ ಮಿಂಚಿದ್ದಾರೆ.

ಬಿಗ್‍ಬಾಸ್ ಒಟಿಟಿ ಸೀಸನ್‍ನಲ್ಲಿ ತಮ್ಮದೇ ರೀತಿಯಲ್ಲಿ ರೂಪೇಶ್ ಶೆಟ್ಟಿ ಅವರು ಗುರುತಿಸಿಕೊಂಡಿದ್ದರು. ಸಾನ್ಯಾ ಅಯ್ಯರ್ ಜೊತೆಗೆ ಹೆಚ್ಚು ಅಪ್ತರಾಗಿದ್ದರು. ದೊಡ್ಮನೆಯಲ್ಲಿ ಅವರು ಕಿರಿಕ್ ಮಾಡಿಕೊಂಡದ್ದು ಕಡಿಮೆ. ಸಾಧ್ಯವಾದಷ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರದ್ದಾಗಿತ್ತು. ಈ ಎಲ್ಲಾ ಕಾರಣದಿಂದ ಅವರು ಜನಮನ ಗೆದ್ದಿದ್ದಾರೆ. ಮಾತ್ರವಲ್ಲದೆ ಹೆಚ್ಚು ವೋಟ್ ಪಡೆಯುವ ಮೂಲಕ ಟಾಪರ್ ಆಗಿ ಸ್ಥಾನ ಗಳಿಸಿದ್ದಾರೆ.

ಇದೀಗ ಇಂದಿನಿಂದ ಬಿಗ್‍ಬಾಸ್ ಕನ್ನಡ ಸೀಸನ್ 9 ಆರಂಭ ಅಗಲಿದೆ. ಹಳೇ ಸೀಸನ್‍ನ 4 ಮಂದಿ ಸ್ಪರ್ಧಿಗಳು ಕೂಡ 9ನೇ ಸೀಸನ್‍ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆಗೆ ಹೊಸ ಸ್ಪರ್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಮೂಡಿದೆ. ಒಟ್ಟಿನಲ್ಲಿ ತುಳುನಾಡಿನ ಕುವರ ನಟ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಅವರು ಬಿಗ್‍ಬಾಸ್ ಕನ್ನಡ ಸೀಸನ್ 9 ಟಿವಿ ಸೀಸನ್‍ಗೆ ಎಂಟ್ರಿಕೊಡಲಿದ್ದು, ಕರ್ನಾಟಕರ ಜನತೆಯನ್ನು ಇನ್ನಷ್ಟು ಮನರಂಜಿಸಲಿ. ಅವರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಲಿ. ಬಿಗ್‍ಬಾಸ್ ಕನ್ನಡ ಸೀಸನ್ 9 ಗೆದ್ದು ಬರಲಿ ಎಂಬುವುದು ವಿ4 ನ್ಯೂಸ್‍ನ ಆಶಯ.

Related Posts

Leave a Reply

Your email address will not be published.