ಮಂಗಳೂರು ಶಾರದೆ 100 ರ ಸಂಭ್ರಮ

ನಮ್ಮ ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಅತೀ ಪ್ರಸಿದ್ಧ್ದವಾದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ 100ನೇ ವರ್ಷದ ಕಾರ್ಯಕ್ರಮಗಳನ್ನು ಎಂದಿನ0ತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ನೂತನ ವಸಂತ ಮಂಟಪದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಸುವುದೆಂದು ನಿಶ್ಚಯಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವತ್ ಭಕ್ತರು ತನು-ಮನ-ಧನಗಳಿಂದ ಪಾಲುಗೊಂಡು ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ವಿನಂತಿ.
ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಈ ವರ್ಷ ಶತಮಾನೋತ್ಸವದ ಸಂಭ್ರಮವೆ0ದು ತಮ್ಮೆಲ್ಲರಿಗೆ ತಿಳಿಸಲು ನಮಗೆ ಬಹಳ ಹರ್ಷವಾಗುತ್ತದೆ.

ಮಂಗಳೂರು ಶ್ರೀ ಶಾರದಾ ಮಹೋತ್ಸವವು ನವರಾತ್ರಿಯ ಪರ್ವಕಾಲವು ಮಂಗಳೂರನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಇರಿಸುವ ವಾರ್ಷಿಕ ಆಚರಣೆಯಾಗಿದ್ದು, ಈ ಉತ್ಸವವನ್ನು ಭವ್ಯ ಪರಂಪರೆಯ ಮೈಸೂರು ದಸರಾಕ್ಕೆ ಎರಡನೆಯದು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಅಲ್ಲದೇ ಏಕೀಕೃತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಗಳಲ್ಲಿ ಹೆಗ್ಗುರುತಾಗಿರುವ ಈ ಉತ್ಸವದ ಪರಂಪರೆಯನ್ನು ಎಲ್ಲರೂ ಅನುಸರಿಸುವುದು ಹೆಮ್ಮೆಯ ವಿಷಯ.
ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ ಶತಮಾನೋತ್ಸವದ ಆಚರಣೆಯು ದಿನಾಂಕ 25-09-2022 ಆದಿತ್ಯವಾರದಿಂದ 06-10-2022 ಗುರುವಾರದವರೆಗೆ ಶ್ರೀ ಆಚಾರ್ಯಮಠದ ವಸಂತ ಮಂಟಪದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಶ್ರೀ ಸಹಸ್ರ ಚಂಡಿಕಾಯಾಗ, ಸೇವಾ ರೂಪದ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ವಿದ್ಯಾ ಸರಸ್ವತಿ, ಸಾಧನಾ ಸರಸ್ವತಿ, ಕಲಾ ಸರಸ್ವತಿ, ಆರೋಗ್ಯ ಸರಸ್ವತಿ ಮತ್ತು ಅನ್ನಪೂರ್ಣ ಸರಸ್ವತಿ ಸೇವೆಗಳು ನಡೆಯಲಿರುವುದು.

ತಾ. 25-09-2022 ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ನೆಹರು ಮೈದಾನದಿಂದ ಬೃಹತ್ ಹೊರೆಕಾಣಿಕೆ ಹೊರಡಲಿರುವುದು. ವಾಹನ ಜಾಥದಲ್ಲಿ ಶ್ರೀ ಶಾರದಾ ಮಾತೆಗೆ ಅರ್ಪಿಸುವ ರಜತ ಪೀಠ, ಪ್ರಭಾವಳಿ, ಸ್ವರ್ಣ ಆರತಿ, ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ, ಹಾಗೂ ಇತರ ಸ್ವರ್ಣಾಭರಣಗಳು ಮೆರವಣಿಗೆಯೊಂದಿಗೆ ಹೊರಡಲಿರುವುದು.
ತಾ. 25-09-2022 ಆದಿತ್ಯವಾರ ರಾತ್ರಿ ಗಂಟೆ 8.00ಕ್ಕೆ ರಾಜಾಂಗಣದಿದ ಉಮಾಮಹೇಶ್ವರ ದೇವಳ ರಸ್ತೆ,
ರಾಮಮಂದಿರ, ನಂದಾದೀಪ ರಸ್ತೆ, ಹೂ ಮಾರ್ಕೆಟ್ ಅಡ್ಡರಸ್ತೆ, ಹೂಮಾರ್ಕೆಟ್, ರಥಬೀದಿಯಾಗಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಉತ್ಸವಸ್ಥಾನಕ್ಕೆ ಪ್ರತಿಷ್ಠೆಗೆ ತರಲಾಗುವುದು.
ತಾ. 26-09-2022 ಸೋಮವಾರ ಬೆಳಿಗ್ಗೆ 7.30 ಗಂಟೆಗೆ ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀ0ದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ

ತಾ . 02 . 10 . 2022 ರ ಆದಿತ್ಯವಾರ ಸಹಸ್ರ ಚಂಡಿಕಾ ಯಾಗದ ಮಹಾ ಪೂರ್ಣಾಹುತಿ ನಡೆಯಲಿದ್ದು ಅದೇ ದಿನಂದಂದು ಮಧ್ಯಾನ್ಹ 1 : 30 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ .
ತಾ . 05 . 10. 2022 ರ ಬುಧವಾರ ವಿಶೇಷ ದೀಪಾಲಂಕಾರ ಸೇವೆ ನಡೆಯಲಿದೆ .ನವರಾತ್ರಿಯ ಪ್ರತಿ ದಿನ ಸರಸ್ವತಿ ಕಲಾ ಮಂಟಪದಲ್ಲಿ ಸಾಯಂಕಾಲದಿಂದ ರಾತ್ರಿಯವರೆಗೆ ದೇಶದ ವಿವಿಧ ಭಾಗಗಳಿಂದ ಅನೇಕ ಹೆಸರಾಂತ ಕಲಾವಿಧರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಳಿರುವುದು .

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನಾನುಕೂಲ ಇರುವ ಭಜಕರಿಗಾಗಿ ಸಮಿತಿಯ ಅಧಿಕೃತ ಯೌಟ್ಯೂಬ್ ಚಾನೆಲ್ ಹಾಗೂ ನಮ್ಮ ಕುಡ್ಲ ಚಾನೆಲ್ ನಲ್ಲಿ ನೇರ ಪ್ರಸಾರ ಕಾರ್ಯಕ್ರಮ ಸಂಯೋಜಿಸಲಾಗಿದೆ .

ಸ0ಜೆ 4.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನಾ ಪೂಜೆೆಸಾಯಂಕಾಲ ಗಂಟೆ 6.00ರಿಂದ ವಿಶೇಷ ದೀಪಾಲಂಕಾರ ಸೇವೆರಾತ್ರಿ ಗಂಟೆ 10.00ಕ್ಕೆ ರಾತ್ರಿಪೂಜೆ
ತಾ. 06-10-2022 ಗುರುವಾರ ಸಂಜೆ ಗಂಟೆ 5.00ಕ್ಕೆ ಪೂರ್ಣಾಲಂಕಾರಗೊ0ಡ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು.

ರಾತ್ರಿ 10.00 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆಯು ಉತ್ಸವಸ್ಥಾನದಿಂದ ಹೊರಟು ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನ ಗುಡಿ, ಚಾಮರಗಲ್ಲಿ ರಥಬೀದಿಯಾಗಿ ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜನೆ. ಎಂದು ಶ್ರೀ ಶಾರದೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಅಡಿಗೆ ಬಾಲಕೃಷ್ಣ ಶೆಣೈ ಈ ಮೂಲಕ ತಿಳಿಸಿರುತ್ತಾರೆ .

ಈ ಬಾರಿ ಶತಮಾನೋತ್ಸವ ಸವಿನೆನಪಿಗಾಗಿ ಶ್ರೀ ಶಾರದಾ ಮಾತೆಗೆ ಭಜಕರಿಂದ ದೇಣಿಗೆ ರೂಪದಲ್ಲಿ ಸ್ವರ್ಣ ನವಿಲು ಸುಮಾರು 750 ಗ್ರಾಮ್ಸ್ ಚಿನ್ನ ದಿಂದ ತಯಾರಿಸಲಾಗಿದೆ , ಸ್ವರ್ಣ ವೀಣೆ ಸುಮಾರು 6 ಕಿಲೋ ಬೆಳ್ಳಿ ಹಾಗು 500 ಜಿಮ್ಸ್ ಚಿನ್ನ ದಿಂದ ತಯಾರಿಸಲಾಗಿದೆ , 16 ಪವನ್ ಚಿನ್ನದ ಕೈ ಕಡಗ ಶ್ರೀ ನಾಗರಾಜ್ ಪೈ ಕುಟುಂಬಸ್ಥರು ಸೇವೆ ಸಲ್ಲಿಸಿರುತ್ತಾರೆ , ನೂತನ ರಜತ ಸಿಂಹಾಸನ ಹಾಗೂ ಪೀಠ ಪ್ರಭಾವಳಿ ಸುಮಾರು 35 ಕಿಲೋ ಬೆಳ್ಳಿಯಿಂದ ತಯಾರಿಸಲಾಗಿದ್ದು ಶ್ರೀ ಮಾತೆಗೆ ಸಮರ್ಪಣೆಗೊಳ್ಳಲಿದೆ . ಸ್ವರ್ಣ ಆರತಿ 21 ಪವನ್ ಚಿನ್ನದಿಂದ ತಯಾರಿಸಲಾಗಿದ್ದು ಯಸ್ . ವಿ . ಟಿ ಮ್ಯಾಟ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಸಮರ್ಪಿಸಲಾಗುತ್ತಿದೆ . ಈ ಬಾರಿ ವಿಶೇಷವಾಗಿ 8 ಲಕ್ಷ ಮೌಲ್ಯದ ಸ್ವರ್ಣ ಜರಿ ಹಾಗೂ 1800 ಸ್ವರ್ಣ ಹೂವಿನಿಂದ ಸೀರೆ ತಯಾರಿಸಲಾಗಿದ್ದು ಶೋಭಾಯಾತ್ರೆಯ ದಿನಂದಂದು ಶ್ರೀ ಮಾತೆಗೆ ಈ ಸೀರೆಯನ್ನು ಉಡಿಸಲಾಗುವುದು ಎಂದು ಶಾರದೋತ್ಸವ ಸಮಿತಿಯ ಮಾಧ್ಯಮ ಸಂಯೋಜಕ ಮಂಜು ನೀರೇಶ್ವಾಲ್ಯ ತಿಳಿಸಿರುತ್ತಾರೆ .

Related Posts

Leave a Reply

Your email address will not be published.