ಬಿಲ್ಲವ ಸೇವಾ ಸಂಘ ಕಾಸರಗೋಡು ; ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಬಿಲ್ಲವ ಸೇವಾ ಸಂಘ(ರಿ ) ಕರಂದಕ್ಕಾಡ್ ಕಾಸರಗೋಡು, ಇದರ ಆಶ್ರಯದಲ್ಲಿ 169ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಶ್ರೀ ನಾರಾಯಣ ಗುರು ಸಭಾ ಮಂಟಪದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಭೆಯಲ್ಲಿ ಶ್ರೀ ಕೇಶವ ಎ ಅಧ್ಯಕ್ಷತೆ ವಹಿಸಿದರು, ಹಿರಿಯ ವ್ಯಕ್ತಿತ್ವ ವಾದ ಸಂತನಡ್ಕ ತರವಾಡಿನ, ಬಾಡೂರ್ ಜಟಾದಾರಿ ದೈವದ ಪೂಜಾರಿಯಾದ ಕರಿಯಪ್ಪ ಪೂಜಾರಿ ಅವರನ್ನು ಫಲ ಪುಷ್ಪಗಳನ್ನು ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಅದೇ ರೀತಿ ರಮಾನಂದ ಬಂಗೇರ, ಕೊರಗಪ್ಪ ಪೂಜಾರಿ, ಬಾಬು ಪೂಜಾರಿ ಗುಡ್ಡೆಮನೆ, ರವಿ ಕರಂದಕ್ಕಾಡು ಅವರಿಗೆ ಶಾಲು ಹೊದಿಸಿ ವಿಶೇಷವಾಗಿ ಸನ್ಮಾನಿಸಲಾಯಿತು. ಕುತ್ಯಾಳ ಶ್ರೀ ಅನ್ನಪೂರ್ಣೇಶ್ವರಿ ಭಜನಾ ತಂಡಕ್ಕೆ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಯಶೀಲ ಸುವರ್ಣ, ಸುಕೀರ್ತಿ, ಮೈಂದಪ್ಪ, ಶಮ್ಮಿ ಕುಮಾರ್, ಸಂತೋಷ್, ಕಮಲಾಕ್ಷ, ರಘು ಮೀಪುಗುರಿ, ಜಯಂತ, ವೀಣಾ ಮೈಂದಪ್ಪ, ಚಂದ್ರಕಲಾ, ಹಾಗೂ ವಿಶಿಷ್ಟ ವ್ಯಕ್ತಿಗಳು ಭಾಗವಹಿಸಿದರು. ಪ್ಲಸ್ ಟು ನಲ್ಲಿ ಅತೀ ಹೆಚ್ಚು ಅಂಕ ಗಳಿಸಿ, ಎಲ್ಲಾ ವಿಷಯಗಳಲ್ಲಿಯೂ A+ ನಲ್ಲಿ ತೆರ್ಗಡೆ ಹೊಂದಿದ ಕುಮಾರಿ ಜ್ಯೋತಿ ಪ್ರಭ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ಗಳೊಂದಿಗೆ ಸನ್ಮಾನಿಸಲಾಯಿತು. ಪ್ರೆಮಜಿತ್ ಕಾಸರಗೋಡು ಕಾರ್ಯಕ್ರಮವನ್ನು ನಿರೂಪಿಸಿದರೆ ಹರಿಕಾಂತ್ ಸಾಲಿಯಾನ್ ಧನ್ಯವಾದಗೈದರು.