ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಕೇಂದ್ರೀಯ ಸ್ಥಾನದಿಂದ ವಜಾ
ಕೊಲ್ಕತ್ತಾದಲ್ಲಿ ಒಂದು ಲಕ್ಷ ನಾಗರಿಕರನ್ನು ಸೇರಿಸಿ ನಡೆದ ಗೀತಾ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಹಣ ಬಾಚಿದ್ದಾರೆ ಎಂದು ಆರೋಪ ಮಾಡಿದ್ದ ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರನ್ನು ಕೇಂದ್ರೀಯ ಸ್ಥಾನದಿಂದ ವಜಾ ಮಾಡಲಾಗಿದೆ.
ಗೀತಾ ಮಂತ್ರ ಪಠಣ ಕಾರ್ಯಕ್ರಮಕ್ಕೆ ಬಿಜೆಪಿಯ ಕೆಲವರು ಹಣವಂತರಿಗೆ ದೊಡ್ಡ ಮೊತ್ತದ ಹಣಕ್ಕೆ ವಿಶೇಷ ಪಾಸ್ ಮಾರಾಟ ಮಾಡಿದ್ದರು. ಅಕ್ರಮ ಹಣ ಮಾಡಿಕೊಂಡಿದ್ದರು ಎಂದು ಅನುಪಮ್ ಆರೋಪ ಮಾಡಿದ್ದರು. ಕೆಲವು ಬಿಜೆಪಿ ನಾಯಕರ ಹೆಸರನ್ನು ಕೂಡ ಅವರು ಹೇಳಿದ್ದರು. ಪಕ್ಷ ವಿರೋಧಿ ಚಟುವಟಿಕೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಹಜ್ರಾರನ್ನು ವಜಾ ಮಾಡಿದ್ದಾರೆ. ಗೃಹಮಂತ್ರಿ ಅಮಿತ್ ಶಾ ಮತ್ತು ನಡ್ಡಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಈ ವಜಾ ನಡೆದಿದೆ.