ಮಂಗಳೂರು: ಶಬರಿಮಲೆ ಯಾತ್ರೆಯ ಗೌಜಿ. ಎಲ್ಲೆಲ್ಲಿಂದಲೋ ಶಬರಿಮಾಲೆಗೆ ಆಗಮಿಸುತ್ತಿರುವ ಅಪಾರ ಸಂಖ್ಯೆಯ ಭಕ್ತರು. ಊರೂರಲ್ಲಿ, ಮಂದಿರ, ಗುಡಿ, ಬೀರಿಗಳಲ್ಲಿ ಭಜನೆ, ದೀಪೋತ್ಸವ, ಇರುಮುಡಿ ಕಟ್ಟುವಿಕೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲೆಲ್ಲೂ ಅಯ್ಯಪ್ಪ ವೃತದಾರಿಗಳು…ಇವೆಲ್ಲವೂ ಕಣ್ಣಿಗೆ ಈಗ ನಿತ್ಯ ಕಾಣುವ ದೃಶ್ಯಗಳಾದರೆ ಅಯ್ಯಪ್ಪ ಮಾಲಾಧಾರಣೆಯ ಹಿಂದೆ ಮಹಿಳೆಯರನ್ನು
ಕಾಸರಗೋಡು: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಫೆಬ್ರವರಿ 16 ರಿಂದ 29 ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ನಡೆಯಿತು. ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಮಂತ್ರಣ ಪತ್ರಿಕೆ
ಮಂಗಳೂರಿನ ಕೊಟ್ಟಾರದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟರ್‌ಗೆ ಲಾರಿಯೊಂದು ಢಿಕ್ಕಿಯಾಗಿದ್ದು, ರಸ್ತೆಗೆ ಎಸೆಯಲ್ಪಟ್ಟ ಸ್ಕೂಟರ್ ಸವಾರನ ಮೇಲೆ ಲಾರಿ ಹರಿದು ಈ ದುರ್ಘಟನೆ ಸಂಭವಿಸಿದೆ.
ದರ್ಗಾ ಸಂದರ್ಶನಗೈಯ್ಯಲು ಬಂದಿದ್ದ ಚಿಕ್ಕಮಗಳೂರು ಮೂಲದ ಮೂವರು ಯುವಕರು ಸಮುದ್ರಪಾಲಾಗುತ್ತಿದ್ದು, ಈ ಪೈಕಿ ಓರ್ವನನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಸಮುದ್ರಪಾಲಾಗಿದ್ದು ಓರ್ವನ ಶವ ಪತ್ತೆಯಾಗಿದೆ. ಚಿಕ್ಕಮಗಳೂರು ನಿವಾಸಿಗಳಾದ ಬಶೀರ್ (23), ಸಲ್ಮಾನ್ (19), ಸೈಫ್ ಆಲಿ (27) ಎಂಬವರು ಉಳ್ಳಾಲ ದರ್ಗಾ ಸಂದರ್ಶನಕ್ಕೆಂದು ಬಂದವರು ಉಳ್ಳಾಲದ ಸಮುದ್ರ ತೀರಕ್ಕೆ ತೆರಳಿದ್ದಾರೆ. ಅಲ್ಲಿ ಸಮುದ್ರದ ನೀರಲ್ಲಿ ಆಟವಾಡುತ್ತಿದ್ದ ಸಂದರ್ಭ ಮೂವರು ಅಲೆಗಳ
ಅಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಕಾಪು ಮಲ್ಲಾರಿನ ಗರಡಿ ಪ್ರದೇಶಕ್ಕೆ ದಾಳಿ ಮಾಡಿದ ಕಾಪು ಪೊಲೀಸರು ಒಂಭತ್ತು ಕೋಳಿ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಬಲೆಗೆ ಬಿದ್ದವರು ಕೈಪುಂಜಾಲು ನಿವಾಸಿಗಳಾದ ವಿಜಿಸ್ಟನ್(42), ಫೆಡ್ರಿಕ್ ಅನ್ಮಣ್ಣ(32), ಕಟ್ ಹೌಸ್ ಮಲ್ಲಾರು ನಿವಾಸಿ ಸಂದೇಶ್(37), ಬೆಳಪು ನಿವಾಸಿ ನಿತಿನ್(30), ಇನ್ನಂಜೆ ನಿವಾಸಿ ಅಭಿಷೇಕ್ (21), ಉಡುಪಿ ಕೊಡವೂರು ನಿವಾಸಿ ಸಚಿನ್ ಕೋಟ್ಯಾನ್ (26) ಹಾಗೂ ಮಲ್ಲಾರು ನಿವಾಸಿ
ಪಡುಬಿದ್ರಿ: ಕಾಪು ಬಿರುವೆರ್ ಸೇವಾ ಸಮಿತಿ ಆಶ್ರಯದಲ್ಲಿ ಅವಳಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಸಮಾಜ ಸೇವಾ ಹಿತದೃಷ್ಟಿಯಿಂದ ಡಿ.30 ಮತ್ತು 31ಕ್ಕೆ ಕಾಪು ದಂಡತೀರ್ಥ ಮೈದಾನದಲ್ಲಿ ನಡೆಯಲಿದೆ ಎಂಬುದಾಗಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ಹೇಳಿದ್ದಾರೆ. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ತಿಳಿಸಿದ್ದಾರೆ. ಪಂದ್ಯಾಕೂಟ ಬಿಲ್ಲವ ಸಮಾಜದ ಯುವಕರಿಗಾಗಿ ನಡೆಯಲಿದ್ದು, ಹತ್ತು ತಂಡಗಳು ಭಾಗವಹಿಸಲಿದೆ. ಸಮಾಜದ 160 ಸದಸ್ಯರು
ಕರಾವಳಿಯ ಪ್ರಸಿದ್ಧವಾಹಿನಿ ವಿ4 ನ್ಯೂಸ್ 247 ಚಾನೆಲ್ ವಿಭಿನ್ನ ಪರಿಕಲ್ಪನೆಯ ಕಾಮಿಡಿ ರಿಯಾಲಿಟಿ ಶೋ ಕಾಮಿಡಿ ಪ್ರೀಮಿಯರ್ ಲೀಗ್. ಕಾಮಿಡಿ ಪ್ರೀಮಿಯರ್ ಲೀಗ್ ತುಳುನಾಡಿನ ಉದಯೋನ್ಮುಖ ಕಲಾವಿದರು ಹಾಗೂ ತಂಡಗಳಿಗೆ ವಿ4 ನ್ಯೂಸ್ 24×7 ಒದಗಿಸಿದ ಒಂದು ವಿಭಿನ್ನ ವೇದಿಕೆ. ಒಂದೇ ಕಡೆ ಚಿತ್ರೀಕರಣ ನಡೆಯದೆ ತಿಂಗಳಿಗೊಂದು ಕಡೆಗಳಂತೆ ಊರೂರಿಗೆ ತೆರಳಿ ಕಾಮಿಡಿ ಸಂತೆಯಂತೆ ಪ್ರದರ್ಶನಗಳನ್ನು ನೀಡಿ ಹಾಸ್ಯದ ರಸದೌತಣ ಉಣಬಡಿಸುವುದು ವಿ4 ನ್ಯೂಸ್ 24×7 ಕಾಮಿಡಿ
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ ಎಂಬಲ್ಲಿ ಡೀಸಿಲ್ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿ ಹೊಡೆದು ಡೀಸೆಲ್ ಸೋರಿಕೆಯಾದ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಗೊಂಡ ಪರಿಣಾಮ ಡೀಸೆಲ್ ಸಂಗ್ರಹಣೆಗಾಗಿ ಮುಗಿಬಿದ್ದ ಜನರು. ಮಾಹಿತಿ ಪಡೆದ ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ
ಮಂಗಳೂರು: ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿಸೆಂಬರ್ 30ರಂದು ಮಂಗಳೂರು ಕಂಬಳ ಅದ್ಧೂರಿಯಾಗಿ ನಡೆಯಲಿದ್ದು ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾಹಿತಿ ನೀಡಿದರು. ಅವರು ನಗರ ಖಾಸಗಿ ಹೊಟೇಲಿನಲ್ಲಿ ಸಉದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಡಿ.30ರಂದು ಬೆಳಗ್ಗೆ 8:30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ
ಪಣಂಬೂರು ಬೀಚಿಗೆ ಹೊಸ ಆಕರ್ಷಣೆ ಆಗಿರುವ ತೇಲುವ ಸೇತುವೆಯನ್ನು ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಸಾರ್ವಜನಿಕರಿಗೆ ತೆರೆದಿಟ್ಟರು.ಬೀಚ್ ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸಲು ಪ್ರವಾಸೋದ್ಯಮ ಸಚಿವರ ಜೊತೆಗೆ ಮಾತನಾಡುವುದಾಗಿ ಈ ಸಂದರ್ಭದಲ್ಲಿ ಖಾದರ್ ಹೇಳಿದರು. 150 ಮೀಟರ್ ಉದ್ದ ಇರುವ ಈ ತೇಲು ಸೇತುವೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ಇದರ ಮೇಲೆ ನಿಂತು ಸೂರ್ಯ ಮುಳುಗುವುದನ್ನು ನೋಡಬಹುದು. ಸದಾ 12 ಮಂದಿ ಜೀವ ರಕ್ಷಕರು ಅಲ್ಲಿ




























