ಪಡುಬಿದ್ರಿ: ಡಿ.30-31ರಂದು ಸಮಾಜ ಸೇವೆಗಾಗಿ ಕಾಪುವಿನಲ್ಲಿ ಕ್ರಿಕೆಟ್ ಪಂದ್ಯಾಕೂಟ
ಪಡುಬಿದ್ರಿ: ಕಾಪು ಬಿರುವೆರ್ ಸೇವಾ ಸಮಿತಿ ಆಶ್ರಯದಲ್ಲಿ ಅವಳಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಸಮಾಜ ಸೇವಾ ಹಿತದೃಷ್ಟಿಯಿಂದ ಡಿ.30 ಮತ್ತು 31ಕ್ಕೆ ಕಾಪು ದಂಡತೀರ್ಥ ಮೈದಾನದಲ್ಲಿ ನಡೆಯಲಿದೆ ಎಂಬುದಾಗಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ಹೇಳಿದ್ದಾರೆ.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ತಿಳಿಸಿದ್ದಾರೆ. ಪಂದ್ಯಾಕೂಟ ಬಿಲ್ಲವ ಸಮಾಜದ ಯುವಕರಿಗಾಗಿ ನಡೆಯಲಿದ್ದು, ಹತ್ತು ತಂಡಗಳು ಭಾಗವಹಿಸಲಿದೆ. ಸಮಾಜದ 160 ಸದಸ್ಯರು ಪಾಲ್ಗೊಳ್ಳಲ್ಲಿದ್ದು, ಅವರನ್ನು ಐಪಿಎಲ್ ಮಾದರಿಯ ಬಿಡ್ಡಿಂಗ್ ಮೂಲಕ ಆಯ್ಕೆ
ಇದೇ ಸಂದರ್ಭ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಯೋಗೀಶ್ ಪೂಜಾರಿ ಸುಜನ್ ಬಂಗೇರ, ವರುಣ್ ಕೋಟ್ಯಾನ್, ರವಿರಾಜ್ ಕೋಟ್ಯಾನ್, ಮಾಧವ ಪೂಜಾರಿ ಉಪಸ್ಥಿತರಿದ್ದರು.