ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿ ರಸ್ತೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ ಕಾಪು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕಟಪಾಡಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯಾವುದೇ ಮೂಲಾಜಿ ಇಲ್ಲದೆ ಟಿಪ್ಪರಲ್ಲಿ ಕ್ಯಾಬಿನ್
ಮೂಡುಬಿದಿರೆ : ಮಂಗಳೂರಿನಿಂದ-ಕಾರ್ಕಳಕ್ಕೆ ಸಂಚಾರ ಮಾಡುವ ಎಕ್ಸ್ ಪ್ರೆಕ್ಸ್ ಮತ್ತು ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸೂಚಿತ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೊಳಿಸಬೇಕು. ನಿಗದಿ ಪಡಿಸಿರುವ ವೇಳಾಪಟ್ಟಿಯಂತೆ ಸಂಚರಿಸಬೇಕು. ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ರೌಡಿಸಂ ತೋರಿಸಬೇಡಿ ಬದಲಾಗಿ ಮೃದುವಾಗಿ ವರ್ತಿಸಿ ತಪ್ಪಿದರೆ ಸಾರ್ವಜನಿಕರು ನಿಯಮ ಉಲ್ಲಂಘನೆ ಮಾಡುವ ಬಸ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ, ದಾಖಲೆ ಸಹಿತ ದೂರು
ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಮಂಗಳವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಸಂಪನ್ನವಾಯಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿದಿವಿಧಾನ ನೆರವೇರಿಸಿದರು. ಶ್ರೀ ದೇವಳದ ಅರ್ಚಕರಾದ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯರು ಮತ್ತು
ಅರಂತೋಡು ತೆಕ್ಕಿಲ್ ಎಚ್.ಪಿ. ಗ್ಯಾಸ್ ವಿತರಣಾ ಸಂಸ್ಥೆ ವತಿಯಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ವಿತರಣಾ ಸಮಾರಂಭವು ಅರಂತೋಡು-ತೊಡಿಕಾನ ಪ್ರಾಥಮಿಕ ಕ್ರಷಿಪತ್ತಿನಸಹಕಾರಿ ಸಂಘದ ಸಿರಿಸೌಧ ಸಭಾಂಗಣದಲ್ಲಿ ನಡೆಯಿತು. ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಕು| ಭಾಗಿರಥಿ ಮುರುಳ್ಯ ಚಾಲನೆ ನೀಡಿದರು. ಅವರು ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಮಾನಿಟರಿಂಗ್ ಆಪ್‌ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು. ದೇರಳಕಟ್ಟೆಯ ದ ಕಂಫರ್ಟ್ ಇನ್ ಸಭಾಂಗಣದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ,
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರು ಇಂದು ದಿಲ್ಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಧಾನಿಯವರಿಗೆ ವಿವರಿಸಿದ ಮುಖ್ಯಮಂತ್ರಿಗಳು ರೂ. 18,177.44 ಕೋಟಿ ರೂಪಾಯಿ ತಕ್ಷಣದ ಪರಿಹಾರಕ್ಕೆ ಮನವಿ ಮಾಡಿದರು. ಇನ್ಪುಟ್ ಸಬ್ಸಿಡಿ ರೂ. 4,663.12 ಕೋಟಿ ತುರ್ತು ಪರಿಹಾರ ರೂ. 12,577.86 ಕೋಟಿ, ಕುಡಿಯುವ ನೀರಿಗೆ ರೂ. 566.78 ಕೋಟಿ, ಜಾನುವಾರುಗಳ ಸಂರಕ್ಷಣೆಗೆ ರೂ. 363.68 ಕೋಟಿ ಹೀಗೆ ಅವುಗಳ
ಸಂಸತ್ ಭದ್ರತಾ ಲೋಪದ ಬಗೆಗೆ ಗೃಹ ಮಂತ್ರಿ ಅಮಿತ್ ಶಾರಿಂದ ವಿವರಣೆ ಬಯಸುತ್ತಿರುವ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸದ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ 49 ಲೋಕ ಸಭಾ ಸದಸ್ಯರನ್ನು ಅಮಾನತು ಮಾಡಿದರು. ಇದರಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆಯು 141ಕ್ಕೆ ಏರಿದೆ. ಉಕ್ಕಿನ ಮನುಷ್ಯನೋ ಸೊಕ್ಕಿನ ಮನುಷ್ಯನೋ ಎಂದು ಅಮಾನತುಗೊಂಡವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರುಗಳನ್ನು ಟೀಕಿಸಿದ್ದಾಗಿಯೂ ಹೇಳಲಾಗಿದೆ. ಸಂಸತ್ತಿನ ಹೊರಗೆ ಅಮಾನತುಗೊಂಡ ಸರ್ವ
ಚೀನಾದ ಗನ್ಸು ಪ್ರಾಂತ್ಯ ಮತ್ತು ಕಿಂಗಾಯಿ ಪ್ರಾಂತ್ಯದ ಹೈಡಾಂಗ್ ನಗರಗಳ ನಡುವೆ ನೆಲನಡುಕ ಸಂಭವಿಸಿ 120ರಷ್ಟು ಜನರು ಜೀವ ತೆತ್ತುದಲ್ಲದೆ 400ಕ್ಕೂ ಹೆಚ್ಚು ಜನರು ಗಾಯಗೊಂಡರು. ಗನ್ಸು ಪ್ರಾಂತ್ಯದಲ್ಲಿ 105 ಜನರು ಪ್ರಾಣಕ್ಕೆ ಎರವಾದರೆ, ನೆರೆಯ ಕಿಂಗಾಯಿ ಪ್ರಾಂತ್ಯದ ಹೈಡಾಂಗ್ ನಗರದಲ್ಲಿ 11 ಜನರು ಸಾವಿಗೀಡಾಗಿದ್ದಾರೆ. ಅಧಿಕೃತವಾಗಿ 116 ಜನರು ಸತ್ತುದಾಗಿಯೂ, 400ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇವೆರಡೂ ಗುಡ್ಡಗಾಡು ಪ್ರಾಂತ್ಯವಾಗಿದ್ದು,
ಹಿರೇಬೆಟ್ಟು ಗ್ರಾಮದ ದೂಮಾವತಿ ದೈವಸಾನದ ಬಳಿಯ ಕಬ್ಯಾಡಿ ಕಂಬಳ ಗದ್ದೆಯ ಸೆರಗಲ್ಲಿ ಜೂಜು ಪಣವೊಡ್ಡಿ ಕೋಳಿ ಅಂಕ ನಡೆಸಿದ್ದ 11 ಮಂದಿಯನ್ನು ಮಣಿಪಾಲ ಠಾಣೆಯ ಪೋಲೀಸರು ಕೋಳಿಗಳ ಸಹಿತ ಬಂಧಿಸಿದ್ದಾರೆ. 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್‍ನ ಬಿಜೆಪಿ ಬೆಂಬಲಿತ ಸದಸ್ಯ ಶುಭಕರ ಶೆಟ್ಟಿ, ರಾಕೇಶ, ಉಮೇಶ, ವಿಘ್ನೇಶ, ವಿವೇಕ, ದಿನೇಶ, ರತ್ನಾಕರ, ವಿಠಲ, ರಾಜೇಶ, ಜಯ, ಸುಂದರ ಬಂಧಿತ ಆರೋಪಿಗಳು. ಇವರಿಂದ 5,450 ರೂಪಾಯಿ ಮೌಲ್ಯದ 10 ಹುಂಜ, ಜೂಜಾಡಿದ 2,800 ರೂಪಾಯಿ
ರಾಮ ಮಂದಿರ ಉದ್ಘಾಟನೆಗೆ ದಯವಿಟ್ಟು ಬರಬೇಡಿ ಎಂದು ರಾಮ ಮಂದಿರ ಹೋರಾಟದ ಪ್ರಮುಖರು ಮತ್ತು ಬಿಜೆಪಿ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ರಾಮ ಮಂದಿರ ಟ್ರಸ್ಟ್. ಇದು ಸ್ವಲ್ಪ ವಿವಾದಕ್ಕೆ ಕಾರಣವಾಗುತ್ತಲೇ ರಾಮ ಮಂದಿರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅವರು ಇಬ್ಬರು ಹಿರಿಯರೂ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಕ್ಷಗಟ್ಟಲೆ ಜನರು ಸೇರುವ ತಾಣದಲ್ಲಿ ಅವರನ್ನು ನೋಡಿಕೊಳ್ಳಲು




























